ಬಳ್ಳಾರಿ: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಸಪ್ತಗಿರಿ ಆಸ್ಪತ್ರೆ ಮತ್ತು ಬಳ್ಳಾರಿಯ ರುದ್ರ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇದೇ ಡಿ.28 ರಂದು ಕಂಪ್ಲಿ ಬಳಿಯ ಎಮ್ಮಿಗನೂರಿನ ಶ್ರೀ ಆಂಜನೇಯ ದೇವಸ್ಥಾನದಲ್ಲಿ, ಮತ್ತು 29 ರಂದು ಬಳ್ಳಾರಿಯ ಪಾರ್ವತಿನಗರದಲ್ಲಿರುವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಹೃದಯ, ನರರೋಗ, ಮೂತ್ರಪಿಂಡ, ಕ್ಯಾನ್ಸರ್ ಮತ್ತು ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ನೀಡಲು ಶಿಬಿರ ಏರ್ಪಡಿಸಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರುದ್ರ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರವಿಶಂಕರ್ ಗುರೂಜಿ, ಸಪ್ತಗಿರಿ ಆಸ್ಪತ್ರೆಯ ವ್ಯವಸ್ಥಾಪಕ ರಾಜೇಶ್ ಗೌಡ ಈ ರೋಗ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಉಸಿರಾಟದ ತೊಂದರೆ, ಹೃದಯ ಸಂಬAಧಿ ಖಾಯಿಲೆ, ದಢೂತಿ ದೇಹಧಾರಿ ತೂಕವುಳ್ಳವರು, ಉಗುರು, ತುಟಿ ಹಸಿರಾಗಿರುವವರು, ಆಯಾಸ, ಮೈ ಬೆವರಿಕೆಯುಳ್ಳವರು ಶಿಬಿರದಲ್ಲಿ ಭಾಗವಹಿಸಬಹುದು. ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರಪಿಂಡದಲ್ಲಿ ಕಲ್ಲುಗಳು, ಮೂತ್ರ ಮಾಡುವ ವೇಳೆ ಉರಿ, ರಕ್ತ ಬರುತ್ತಿದ್ದರೆ ಅಂಥವರು ಸಹ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದ್ದಾರೆ.
ತಜ್ಞವೈದ್ಯರಾದ ಡಾ.ಜಯಂತ್, ಡಾ.ಭರತ್, ಸರ್ಜನ್ ಮತ್ತು ಮೆಡಿಸಿನ್ ವಿಭಾಗದ ಡಾ.ಫಯಾಜ್ ಸೇರಿದಂತೆ ವೈದ್ಯಕೀಯ ತಾಂತ್ರಿಕ ನಿಪುಣರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಬಿಪಿಎಲ್, ಹಸಿರು ಕಾರ್ಡು, ಅಂತ್ಯೋದಯ, ರೇಷನ್ ಕಾರ್ಡುದಾರರು ಉಚಿತವಾಗಿ ಚಿಕಿತ್ಸೆ ಪಡೆದು ಬಳಿಕ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಹುದೆಂದರು. ಎಲ್ಲವನ್ನೂ ಟ್ರಸ್ಟ್ ಸಂಪೂರ್ಣವಾಗಿ ವೆಚ್ಚ ಭರಿಸಲಿದೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರೋಗ್ಯ ಯೋಜನೆಗಳ ಸಮೀಕರಣದೊಂದಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ರೋಗಿಗಳಿಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಹೋಗಿ ಬರುವ, ಊಟದ ವ್ಯವಸ್ಥೆಯ ವೆಚ್ಚವನ್ನು ಟ್ರಸ್ಟ್ ಭರಿಸುತ್ತದೆ ಎಂದು ತಿಳಿಸಿದರು. ರೋಗಿಗಳು ಬರುವ ಮುನ್ನ ಹಳೆಯ ವೈದ್ಯಕೀಯ ತಪಾಸಣಾ ದಾಖಲಾತಿಗಳನ್ನು ತಪ್ಪದೇ ತರಬೇಕೆಂದು ತಿಳಿಸಿದ್ದಾರೆ. ಮತ್ತು ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕೆಂದು ತಿಳಿಸಿದರು. ಈ ಸಂಧರ್ಭದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ರಾಜು, ಸದಸ್ಯರಾದ ಮೋಹನ್ ಗೌಡ, ಮಹಂತೇಶ್ ಶಾಸ್ತ್ರಿ, ಶೋಭಾರಾಣಿ ಮತ್ತು ಕುಮಾರಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ 9611061234 ರಾಜೇಶ್ ಗೌಡ ಸಪ್ತಗಿರಿ ಆಸ್ಪತ್ರೆಯ ಮ್ಯಾನೇಜರ್ ಅವರನ್ನು ಸಂಪರ್ಕಿಸಬಹುದು.