Breaking News

ಸಹ್ಯಾದ್ರಿ ನಗರ ಬಸ್ ಪಲ್ಟಿ

Spread the love

ಸಹ್ಯಾದ್ರಿ ನಗರ ಬಸ್ ಪಲ್ಟಿ: ಗಾಯಾಳುಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಭೇಟಿಯಾದ ಮುಸ್ತಾಕ್ ಮುಲ್ಲಾ |
ಸಹ್ಯಾದ್ರಿ ನಗರದಲ್ಲಿ ಸಾರಿಗೆ ಬಸ್ ಪಲ್ಟಿಯಾಗಿ ಗಾಯಗೊಂಡ ಪ್ರಯಾಣಿಕರ ಆರೋಗ್ಯವನ್ನು ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಮುಸ್ತಾಕ್ ಮುಲ್ಲಾ ಜಿಲ್ಲಾಸ್ಪತ್ರೆಗೆ ದೌಡಾಯಿಸಿ ವಿಚಾರಣೆ ನಡೆಸಿದರು.
ಸಹ್ಯಾದ್ರಿ ನಗರದಲ್ಲಿ ಸಾರಿಗೆ ಬಸ್ ಪಲ್ಟಿಯಾಗಿರುವುದರಿಂದ ಸಾರಿಗೆಯಲ್ಲಿ ಪ್ರಯಾಣ ಮಾಡುತ್ತಿರುವವರಿಗೆ ಹಾಗೂ ಚಾಲಕ, ನಿರ್ವಾಹಕರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆ ನೀಡಬೇಕು. ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಗಾಯಾಳುಗಳಿಗೆ ಮುಸ್ತಾಕ್ ಮುಲ್ಲಾ ದೈರ್ಯ ತುಂಬಿದರು.
ಮುಸ್ತಾಕ್ ಮುಲ್ಲಾ ಸ್ವತಃ ಮುಂದೆ ನಿಂತು ಸಾರಿಗೆ ಬಸ್ ಪಲ್ಟಿಯಾದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ವೈದ್ಯರಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ತಿಳಿಸಿದರು.ಬೆಳಗಾವಿ: ಸಹ್ಯಾದ್ರಿ ನಗರದಲ್ಲಿ ಸರ್ಕಾರಿ ಬಸ್ ಪಲ್ಟಿ – ಪ್ರಾಣಾಪಾಯ ತಪ್ಪಿದ ಅಪಘಾತ
ಬೆಳಗಾವಿ: ನಗರದ ಸಿಬಿಟಿಯಿಂದ ಸಹ್ಯಾದ್ರಿ ನಗರ ಕಡೆಗೆ ತೆರಳುತ್ತಿದ್ದ ಸರ್ಕಾರಿ ಬಸ್, ಸಹ್ಯಾದ್ರಿ ನಗರ ವಿದ್ಯಾನಗರ ಬಾಕ್ಸ್ ರಸ್ತೆಯ ಹತ್ತಿರ 16/09/2025 ಮಂಗಳವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಪಲ್ಟಿಯಾದ ಘಟನೆ ನಡೆದಿದೆ.
ಬಸ್‌ನಲ್ಲಿ ಸುಮಾರು 15–18 ಪ್ರಯಾಣಿಕರು ಇದ್ದರೆಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ ಎಲ್ಲರೂ ಸುರಕ್ಷಿತರಾಗಿದ್ದಾರೆ. ಬಸ್‌ನ ಕಂಡಕ್ಟರ್ ರೇಣುಕಾ ಹೊನ್ನೂರ್ (35) ಅವರಿಗೆ ಗಾಯಗಳಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಕಥಾಲ್ ವಿನಾಮ್ದಾರ್ (52) ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಉಳಿದ ಕೆಲವರು ಸಣ್ಣ ಗಾಯಗಳಿಂದ ಬೇರೆಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಹಾಜರಾಗಿದ್ದಾರೆ.
ಚಾಲಕ ವಿನಾಮ್ದಾರ್ ಹೇಳಿದರು: “ಚಾಲನೆ ಮಾಡುವಾಗ ಏನೋ ಗೊತ್ತಾಗದೆ ಬಸ್ ಅಚಾನಕ ಎಡಗಡೆ ಸೈಡಿಗೆ . ನಿಯಂತ್ರಣ ತಪ್ಪಿ ಪಲ್ಟಿಯಾಯಿತು, ಅಷ್ಟೇ ನನಗೆ ತಿಳಿದು ಬಂದಿದೆ.” ಬಸ್‌ನಲ್ಲಿದ್ದ ಒಬ್ಬ ಕಿಶೋರ ಪ್ರಯಾಣಿಕ ಹೇಳಿದನು: “ನಮಗೆ ಏನೂ ಗೊತ್ತಾಗಲಿಲ್ಲ. ಬಸ್ ನೇರವಾಗಿ ಪಲ್ಟಿಯಾಯಿತು. ಅಷ್ಟರಲ್ಲಿ ಎಚ್ಚೆತ್ತುಕೊಂಡು ನಮ್ಮ ಪ್ರಾಣ ಉಳಿಸಿಕೊಂಡೆವು.”
ಘಟನೆ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.

Spread the love

About Laxminews 24x7

Check Also

ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ

Spread the loveಕರ್ನಾಟಕ‌ ರಾಜ್ಯೋತ್ಸವದಲ್ಲಿ ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ಅನುಮತಿ ಕೊಡುವುದಿಲ್ಲ ಎಂದು ರಾತ್ರೋರಾತ್ರಿ ಈ‌ ಮೊದಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ