Breaking News

ಜೈನಾಪೂರ ಗ್ರಾ.ಪಂ ನ ನೂತನ ಅಧ್ಯಕ್ಯೆಯಾಗಿ ಸುಜಾತಾ ಸೋಲಬನ್ನವರ ಅವಿರೋಧ ಆಯ್ಕೆ

Spread the love

ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷೆಯಾಗಿ ಸುಜಾತಾ ಷಣ್ಮುಗ ಸೋಲಬನ್ನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕಾಗಿ ಇವತ್ತು ನಡೆದ ಚುನಾವಣೆಯಲ್ಲಿ ಸುಜಾತಾ ಸೋಲಬನ್ನವರ ಒಂದೇ ಅರ್ಜಿ ಸಲ್ಲಿಕೆಯಾಗಿದ್ದರಿಂದ ಚುನಾವಣಾ ಅಧಿಕಾರಿ ಕಮಲಾಕರಯವರು ಸುಜಾತಾ ಸೋಲಬನ್ನವರ ಅವರನ್ನು‌ ಅಧ್ಯಕ್ಷರನ್ನಾಗಿ ಘೋಷಿಸಿದರು.
ನೂತನ ಅಧ್ಯಕ್ಯೆಯಾಗಿ ಆಯ್ಕೆಯಾದ ಸುಜಾತಾ ಷಣ್ಮುಖ ಸೋಲಬನ್ನವರ ಅವರನ್ನು ಸತ್ಕರಿಸಿ ಗೌರವಿಸಲಾಯಿತು.ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ನನ್ನನೂ ಅವಿರೋಧವಾಗಿ ಆಯ್ಕೆಗೆ ಶ್ರಮಿಸಿದ ಸದಸ್ಯರಿಗೆ ಧನ್ಯವಾದಗಳು ತಿಳಿಸುತ್ತೇನೆ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಈ ಸಂಧರ್ಭದಲ್ಲಿ ಪಿಡಿಓ ಶಿವಾನಂದ ದೇಸಾಯಿ, ಗ್ರಾಮ‌ ಪಂಚಾತಯತ ಉಪಾಧ್ಯಕ್ಷರಾದ ಅವ್ವಕ್ಕ ಕೃಷ್ಣಪ್ಪ ಜೋಗೆ, ಸದಸ್ಯರಾದ ಸುರೇಸ ಘರಬುಡೆ,ಶೃತಿ ರತ್ನಪ್ಪ ತಳಕೇರಿ,ತಮ್ಮಣಾ ಬಸಪ್ಪ ಘರಬುಡೆ,ಮಹಾದೇವಿ ಅಶೋಕ‌ ನಿಂಗನೂರೆ,ಸುಗಂಧಾ ಪ್ರಕಾಶ ಘರಬುಡೆ,ರಾಜು ಗೌರಾಗೋಳ,ಸುಮಾ ಶಿವಾಜಿ
ನಾಗರಾಳೆ,ರೋಜಾಬಾಯಿ ಭಿಮಪ್ಪ ತಳವಾರ,ಬಾಳಕೃಷ್ಣ ಶಂಕರ ದೊಡ್ಡಲಚ್ಚಪಗೋಳ,ಬಸವರಾಜ ಲಕ್ಷ್ಮಣ ಮಾಳಗೆ,ಮಹಾದೇವ ಯಲ್ಲಪ್ಪ ಯಾದಗೂಡೆ,ರಾಮಗೌಡ ಈರಗೌಡ ಕರಗಾಂವ,ಅನೀಲಕುಮಾರ ಕಲಗೌಡ ಪಾಟೀಲ,ಮಲ್ಲಿಕಾರ್ಜುನ ಮಂಕಜ , ಅಶೋಕ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Spread the love

About Laxminews 24x7

Check Also

25 ಸಾವಿರ ಲಂಚ ಪಡೆದು ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ  ಸಿಕ್ಕಿಬಿದ್ದ ಪಿಡಿಓ

Spread the loveಬಾಕಿ ಸಂಬಳ ನೀಡಲು ಲಂಚ ಪಡೆದ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹುಣಸೂರು ತಾಲೂಕು ಮುಳ್ಳೂರು ಗ್ರಾಮ ಪಂಚಾಯ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ