ಬಾಗಲಕೋಟೆಯಲ್ಲಿಯೂ ಧರ್ಮಸ್ಥಳದ ಅವಹೇಳನವನ್ನು ಖಂಡಿಸಿ ಭಕ್ತರು ಪ್ರತಿಭಟನೆಯನ್ನು ನಡೆಸಿ, ಅವಹೇಳನ ಮಾಡುವವರ ವಿರುದ್ಧ ಕ್ರಮಕೈಗೊಳ್ಳದಿದ್ದರೇ, ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.
ಧರ್ಮಸ್ಥಳದ ಹೆಗ್ಗಡೆ ಕುಟುಂಬದ ಗೌರವಕ್ಕೆ ಧಕ್ಕೆ ತರಲು ಒಳಸಂಚು ನಡೆಸುತ್ತಿರುವ ದುಷ್ಟ ವ್ಯಕ್ತಿಗಳ ವಿರುದ್ದ ಭಕ್ತಾಭಿಮಾನಿಗಳಲ್ಲಿ ಆಕ್ರೋಶ ಉಕ್ಕಿದೆ. ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಇಂದು ಭಕ್ತರು ಪ್ರತಿಭಟನೆ ನಡೆಸಿದರು.
ಧರ್ಮಸ್ಥಳದ ಭಕ್ತಾಭಿಮಾನಿಗಳ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿ, ಧರ್ಮಾಧಿಕಾರಿಗಳಾದ ವೀರೆಂದ್ರ ಹೆಗಡೆ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ನಾಸ್ತಿಕ ವ್ಯಕ್ತಿಗಳಿಂದ ನಡೆಯುತ್ತಿರುವ ಧರ್ಮಾಧಿಕಾಗಳ ತೇಜೋವಧೆ ಪ್ರಯತ್ನಗಳನ್ನು ಭಕ್ತರು ತಿರಸ್ಕರಿಸಿದ್ದಾರೆ. ಸರ್ಕಾರ ಎಸ್ ಐ ಟಿ ರಚನೆ ಮಾಡಿ ಈಗಾಗಲೇ ದೊಡ್ಡ ತಪ್ಪುಮಾಡಿದೆ ಇದು ಖಂಡನೀಯ .
ಇದು ಕೇವಲ ಹಗಡೆ ಕುಟುಂಬದ ವಿಷಯವಲ್ಲ. ಇದು ನಮ್ಮ ಧಾರ್ಮಿಕ ಪಾವಿತ್ರೆಯ ವಿಷಯ. ದುಷ್ಟವ್ಯಕ್ತಿಗಳ ವಿರುದ್ದ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಧರ್ಮಸ್ಥಳ ಪರಂಪರೆ, ಪಾವಿತ್ರ್ಯ ಹಾಗೂ ಧರ್ಮಾಧಿಕಾರಿಗಳ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತನ ಜವಾಬ್ದಾರಿ. ಅವಹೇಳನ ಮಾಡುವವರ ವಿರುದ್ಧ ಕ್ರಮಕೈಗೊಳ್ಳದಿದ್ದರೇ, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಸ್ಥಳದ ಭಕ್ತಾಧಿಗಳು ಭಾಗಿಯಾಗಿದ್ಧರು.