Breaking News

ಪದೇ ಪದೇ ತಮ್ಮ ನಿರ್ಧಾರವನ್ನ ಬದಲಿಸುತ್ತಿರುವ B.S.Y..ಇಂದಿನಿಂದ ಅಲ್ಲ, ನಾಳೆಯಿಂದ ಜಾರಿ; ರಾತ್ರಿ 11ರ ಬಳಿಕ ಎಲ್ಲಾ ಸೇವೆ ಬಂದ್

Spread the love

ಬೆಂಗಳೂರು (ಡಿ. 23): ಬ್ರಿಟನ್​ನ ಹೊಸ ರೂಪಾಂತರದ ಕೊರೋನಾ ವೈರಸ್​ ಆತಂಕದ ಹಿನ್ನಲೆ ರಾಜ್ಯದಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿತ್ತು. ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಇಂದು ಮಧ್ಯಾಹ್ನ  ಆದೇಶಿಸಿತ್ತು. ಆದರೆ, ವರ್ಷಾಂತ್ಯದಲ್ಲಿ ಈ ರೀತಿ ಕರ್ಫ್ಯೂ ಜಾರಿ ಮಾಡುವುದರಿಂದ ಬಾರ್​ ಅಂಡ್​ ರೆಸ್ಟೋರೆಂಟ್​, ಓಲಾ, ಉಬರ್​ ಸೇರಿದಂತೆ ಅನೇಕ ಉದ್ಯಮಗಳಿಗೆ ನಷ್ಟವಾಗಲಿದೆ ಎಂಬ ವಿರೋಧ ಎಲ್ಲೆಡೆ ವ್ಯಕ್ತವಾಗಿತ್ತು. ಈ ನೈಟ್​ ಕರ್ಫ್ಯೂನಿಂದಾಗಿ ಕ್ರಿಸ್ಮಸ್​ ಮತ್ತು ಹೊಸ ವರ್ಷಾಚರಣೆ ಸಮಯದ ಅಧಿಕ ವಹಿವಾಟಿಗೆ ಹೊಡೆತ ಬೀಳಲಿದೆ. ಈ ಹಿನ್ನಲೆ ಈ ಕರ್ಫ್ಯೂ ಅವಧಿಯನ್ನು ಒಂದೂವರೆ ಗಂಟೆಗಳ ಕಾಲ ತಡವಾಗಿ ಹೇರುವಂತೆ ಬಾರ್​ ಅಂಡ್​ ರೆಸ್ಟೋರೆಂಟ್​ ಮಾಲೀಕರು ಸೇರಿದಂತೆ ಹಲವರು ಬೇಡಿಕೆ ಇರಿಸಿದ್ದರು. ಈ ಬೇಡಿಕೆ ಮನಗಂಡ ಸರ್ಕಾರ ಬದಲಾವಣೆ ನಡೆಸಿದೆ. ಅದರಂತೆ ಇಂದಿನಿಂದ ಬದಲು ನಾಳೆಯಿಂದ ಅಂದರೆ ಡಿ. 24ರಿಂದ ಜ. 1ರವರೆಗೆ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 10ರ ಬದಲು ರಾತ್ರಿ 11 ರಿಂದ ಬೆಳಿಗ್ಗೆ 5ರವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ತಮ್ಮ ಟ್ವೀಟರ್​ನಲ್ಲಿ ಸ್ಪಷ್ಟಪಡಿಸಿರುವ ಸಿಎಂ ಬಿಎಸ್​ ಯಡಿಯೂರಪ್ಪ ಅವರು, ಇದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂವನ್ನು ನಾಳೆಯಿಂದ ಅಂದರೆ ದಿನಾಂಕ 24ರಿಂದ ಜನವರಿ 1ರವರೆಗೆ ಜಾರಿ ಮಾಡಲಾಗಿದೆ. ರಾತ್ರ 10ರ ಬದಲಿಗೆ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದಿದ್ದಾರೆ.

ಅಲ್ಲದೇ ಈ ನೈಟ್​ ಕರ್ಫ್ಯೂ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಡಿ. 24ರಂದು ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಕ್ರಮ ವಹಿಸಲಾಗಿದೆ. ಈ ಸಂದರ್ಭದಲ್ಲಿ ಮಿಡ್​ನೈಟ್​ ಮಾಸ್​ಗೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ನೈಟ್​ ಕರ್ಫ್ಯೂ ವೇಳೆ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗೆ ನಿರ್ಬಂಧ ವಿಧಿಸಲಾಗಿದೆ. ಬಸ್ಸು, ರೈಲು, ವಿಮಾನ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ. ಆಟೋ, ಟ್ಯಾಕ್ಸಿ, ಗಳಿಗೆ ಪಿಕಪ್- ಡ್ರಾಪ್ ಗಳಿಗೆ ಅನುಮತಿ ನೀಡಲಾಗಿದೆ.  ಗೂಡ್ಸ್ ವಾಹನ, ಖಾಲಿ ವಾಹನ ಗಳು, ಟ್ರಕ್ಸ್​ಗಳು ಸಂಚಾರ ಮಾಡಬಹುದು. ರಾತ್ರಿ ಪಾಳಿಯಲ್ಲಿ ಶೇಕಡಾ 50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಕೆಲಸ ಮಾಡಿಸಬಹುದಾಗಿದ್ದು, ಇವರಿಗೆ ಐಡಿ ಕಾರ್ಡ್​ ಕಡ್ಡಾಯವಾಗಿ ನೀಡಬೇಕು. ದೂರದ ಪ್ರಯಾಣ ಮಾಡಲು ಯಾವುದೇ ನಿರ್ಬಂಧ ಇಲ್ಲ. ಅವರು ಎಂದಿನಂತೆ ಪ್ರಯಾಣ ಮಾಡಬಹುದು. ಇನ್ನುಳಿದಂತೆ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ‌ ನಿರ್ಬಂಧವಿಧಿಸಲಾಗಿದೆ.


Spread the love

About Laxminews 24x7

Check Also

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ-48 ರ ಆರು ಪಥಗಳ ಕಾಮಗಾರಿ ಅಂತಿಮ ಹಂತದಲ್ಲಿ; ಪ್ರಯಾಣಿಕರಿಗೆ ಶೀಘ್ರವೇ ಸುಗಮ ಸಂಚಾರಕ್ಕೆ ಮುಕ್ತ: ಸಂಸದ ಈರಣ್ಣ ಕಡಾಡಿ

Spread the loveಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-48 ರ ಪುಣೆ-ಬೆಂಗಳೂರು ವಿಭಾಗದ ಆರು ಪಥಗಳ ಕಾಮಗಾರಿಯು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ