ಬೆಳಗಾವಿಯಲ್ಲೇ ಮೊದಲಬಾರಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ…
ಶಾಸಕ ಅಭಯ್ ಪಾಟೀಲ್ ಅವರಿಂದ ಲೋಕಾರ್ಪಣೆ
ವಾರ್ಡ್ ಸಂಖ್ಯೆ 29ರಲ್ಲಿ ಬೆಳಗಾವಿಯಲ್ಲೇ ಮೊದಲಬಾರಿಗೆ ಡಿಜಿಟಲ್ ಸೈನ್ ಬೋರ್ಡ್ ಉದ್ಘಾಟನೆ ಕಾರ್ಯಕ್ರಮ ಭವ್ಯವಾಗಿ ನಡೆಯಿತು.
ಶಾಸಕರಾದ ಅಭಯ ಪಾಟೀಲ ಹಾಗೂ ಶಾಸಕರಾದ ಬಡೆ ಅವರು ಡಿಜಿಟಲ್ ಸೈನ್ ಬೋರ್ಡ್’ನ್ನು ಉದ್ಘಾಟಿಸಿದರು.
ಮೊದಲ ಹಂತದಲ್ಲಿ 15 ಡಿಜಿಟಲ್ ಬೋರ್ಡ್‌ಗಳನ್ನು ವಿವಿಧ ಕ್ರಾಸ್‌ಗಳಲ್ಲಿ ಅಳವಡಿಸಲಾಗಿದ್ದು, ಎರಡನೇ ಹಂತದಲ್ಲಿ ಉಳಿದಿರುವ ಕಾಲೋನಿಗಳಲ್ಲಿಯೂ ಇವುಗಳನ್ನು ಅಳವಡಿಸಲಾಗುವುದು ಎಂದು ನಗರಸೇವಕ ನಿತಿನ್ ಜಾಧವ ತಿಳಿಸಿದ್ದಾರೆ.
ಹಿಂದಿನ ದಿನಗಳಲ್ಲಿ ಪೆಟ್ರಾ ಬೋರ್ಡ್‌ಗಳನ್ನು ಅಳವಡಿಸಲಾಗುತ್ತಿತ್ತು, ಆದರೆ ಅವು ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಡಿಜಿಟಲ್ ಬೋರ್ಡ್‌ಗಳ ಮೂಲಕ ದಿನವಿಡೀ ಮತ್ತು ರಾತ್ರಿ ಸಮಯದಲ್ಲಿಯೂ ಸೊಗಸಾಗಿ ಕಾಣಸಿಗುವ ಮೂಲಕ ನಾಗರಿಕರಿಗೆ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಸುಧೀರ್ ಕುಲಕರ್ಣಿ, ಅರವಿಂದ ಸಾಂಗೋಳಿ, ಮಂಜುನಾಥ ಶೇಠ್, ರಾಜು ಹೊನ್ನೊಳ್ಳಿ ಹಾಗೂ ಹಲವಾರು ಗಣ್ಯರು ಹಾಗೂ ನಾಗರಿಕರು ಉಪಸ್ಥಿತರಿದ್ದರು.