Breaking News

ಹೃದಯಾಘಾತಗಳಿಂದ ಹೆಚ್ಚು ಸಾವಾಗುತ್ತಿದೆ ಎಂಬುದು ಸುಳ್ಳು: ವೈದ್ಯಕೀಯ ಸಚಿವರ ಸ್ಪಷ್ಟನೆ

Spread the love

ಹಾವೇರಿ: ರಾಜ್ಯದಲ್ಲಿ ಹೃದಯಾಘಾತಗಳಿಂದ ಹೆಚ್ಚು ಸಾವುಗಳಾಗುತ್ತಿವೆ ಎಂಬ ತಪ್ಪು ಸಂದೇಶ ಹೋಗಿದೆ. ಹೃದಯಾಘಾತಗಳಿಂದ ಹೆಚ್ಚು ಸಾವಾಗುತ್ತಿದೆ ಎಂಬುದು ಸುಳ್ಳು ಎಂದು ವೈದ್ಯಕೀಯ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಹಾವೇರಿ ತಾಲೂಕಿನ ನಲೋಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಜಿಟಿಟಿಸಿ ತರಬೇತಿ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೃದಯಾಘಾತ ಪ್ರಕರಣಗಳ ಬಗ್ಗೆ ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ಎರಡು ದಿನಗಳ ಹಿಂದೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದೇವೆ. ಈ ಬಗ್ಗೆ ಎಲ್ಲ ಮಾಧ್ಯಮಗಳಲ್ಲೂ ಪ್ರಸಾರ ಕೂಡ ಆಗಿದೆ. ಕಳೆದ ಆರು ತಿಂಗಳ ಅಂಕಿ-ಸಂಖ್ಯೆ ವಿಶ್ಲೇಷಣೆ ಮಾಡಿದ್ದೇವೆ. ಇದಕ್ಕಾಗಿ ಒಂದು ಸಮಿತಿ ಸಹ ಮಾಡಿದ್ದು, ಅದರ ಪ್ರಕಾರ ಮರಣ ಸಂಖ್ಯೆಯಲ್ಲಿ ಹೆಚ್ಚಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಜನರಿಗೆ ತಪ್ಪು ಮಾಹಿತಿ ಹೋಗಿದ್ದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಈ ರೀತಿ ಭಯಭೀತರಾಗಬೇಕಿಲ್ಲ ಎಂದರು.

ಹೃದಯಾಘಾತಗಳಿಂದ ಹೆಚ್ಚು ಮರಣವಾಗುತ್ತಿವೆ ಎಂಬ ತಪ್ಪು ಮಾಹಿತಿಯಿಂದ ಸಹಜವಾಗಿ ಜನರಲ್ಲಿ ಭಯ ಹುಟ್ಟಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇವೆ. ಹೃದಯಾಘಾತಗಳಿಂದ ಹೆಚ್ಚು ಸಾವಾಗುತ್ತಿದೆ ಎಂಬುದು ಸುಳ್ಳು. ಜಂಟಿ ಸುದ್ದಿಗೋಷ್ಠಿಯಲ್ಲಿ ವರದಿ ಬಗ್ಗೆ ವಿವರಣೆ ನೀಡಿದ್ದೇವೆ. ಅಲ್ಲದೇ ಜನರಲ್ಲಿ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಹೃದಯಾಘಾತವಾಗುತ್ತದೆ ಎಂಬ ತಪ್ಪು ನಂಬಿಕೆ ಇದೆ. ಹೃದಯಾಘಾತಕ್ಕೂ ವ್ಯಾಕ್ಸಿನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಹೃದಯರೋಗ ತಜ್ಞರಿಲ್ಲ ಅನ್ನೋದು ನಮ್ಮ ಗಮನಕ್ಕಿದೆ. ಸೂಪರ್ ಸ್ಪೇಷಲ್ ಆಸ್ಪತ್ರೆಗಳಲ್ಲಿ ಮಾತ್ರ ಹೃದಯರೋಗ ತಜ್ಞರು ಇರುತ್ತಾರೆ. ಸದ್ಯ ಹಾವೇರಿಯಲ್ಲಿ ಮೆಡಿಕಲ್ ಕಾಲೇಜ್ ಆರಂಭವಾಗಿದೆ. ನಂತರದ ದಿನಗಳಲ್ಲಿ ಹೃದಯರೋಗ ತಜ್ಞರು ಬರಲಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನರ್ ಇನ್ಸ್​ಸ್ಟಾಲೇಷನ್ ಟೆಂಡರ್ ಆಗಿದೆ. ಆದಷ್ಟು ಬೇಗ ಸಿದ್ದವಾಗಿ ಕಾರ್ಯನಿರ್ವಹಿಸುತ್ತದೆ. ಹಾವೇರಿ ಮೆಡಿಕಲ್ ಕಾಲೇಜು ಕಾರ್ಯಾರಂಭ ಮಾಡಿದ್ದು ಉದ್ಘಾಟನಾ ಭಾಗ್ಯ ಕಂಡಿಲ್ಲ. ಆದಷ್ಟು ಬೇಗ ಉದ್ಘಾಟನೆ ಮಾಡುವುದಾಗಿ ಸಚಿವರು ಹೇಳಿದರು.

ಇದೇ ವೇಳೆ ಮೈಸೂರಲ್ಲಿ ಹಮ್ಮಿಕೊಂಡಿರುವ ಸಮಾವೇಶದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಶಿವಾನಂದ ಪಾಟೀಲ್,, ಅಧಿಕಾರಕ್ಕೆ ಬಂದು ರಾಜ್ಯ ಸರ್ಕಾರಕ್ಕೆ ಎರಡು ವರ್ಷವಾಗಿದೆ. ಅದಕ್ಕೆ ಸಮಾವೇಶ ಮಾಡುವುದು ಸ್ವಭಾವಿಕ. ಅದು ಪಕ್ಷದ ಕೆಲಸ. ಹಾಗಾಗಿ ಮಾಡಲಾಗುತ್ತಿದೆ. ಮೈಸೂರಿನ ಬಳಿಕ ಮುಂದೆ ಉತ್ತರ ಕರ್ನಾಟಕದಲ್ಲಿಯೂ ಮಾಡಲಿದ್ದೇವೆ ಎಂದು ತಿಳಿಸಿದರು.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ