Breaking News

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ
ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು ಮನೆ ಕುಸಿತಗೊಂಡು ಎರಡು ಆಟೋ ರೀಕ್ಷಾ ಒಂದು ದ್ವೀಚಕ್ರ ವಾಹನ ಜಖಂಗೊಂಡ ಘಟನೆ ಶುಕ್ರವಾರ ಮುಂಜಾನೆ ಜಾವ ಸಂಭವಿಸಿದೆ.
ಬೆಳಗಾವಿಯ ಚವ್ಹಾಟ ಗಲ್ಲಿಯಲ್ಲಿರುವ ಕಲ್ಯಾಣ ಚೌಕ ಹತ್ತಿರ ಕೀಶನ ಶಹಾಪೂರಕರ ಎಂಬುವರಿಗೆ ಸೇರಿದ ಮನೆಯೊಂದು ಕುಸಿತವಾಗಿದೆ.
ಮನೆಯೊಳಗೆ ಜನರು ವಾಸವಿರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆಯ ಮುಂಭಾಗ ನಿಲ್ಲುಗಡೆ ಮಾಡಿದ ಎರಡು ಆಟೋ ರೀಕ್ಷಾ ಒಂದು ದ್ವೀಚಕ್ರ ವಾಹನ ಜಖಂಗೊಂಡಿವೆ.
ಈ ಕುರಿತು ಸಂಭಂದಿಸಿದ ಕಂದಾಯ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ಮನೆಯ ಮಾಲೀಕರು ತಿಳಿಸಿದ್ದಾರೆ.
ಹಳೆಯ ಮನೆಯಾಗಿದ್ದರಿಂದ ಬೀಳುವ ಸ್ಥಿತಿಯಲ್ಲಿತ್ತು ದುರಸ್ಥಿ ಮಾಡಿದ ಬಳಿಕ ವಾಪಸ ಬರಬೇಕೆಂದು ಕಳೆದ ಎರಡು ಮೂರು ತಿಂಗಳಗಳಿಂದೇ ಕೀಶನ ಶಹಾಪೂರಕರ ಕುಟುಂಬಸ್ಥರು ಬೇರೆಯಡೆ ವಾಸವಾವಿದ್ದರು.

Spread the love

About Laxminews 24x7

Check Also

ವಿಕಲಚೇತನ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ: 100 ವಿಕಲಚೇತನರಿಗೆ ಪದವಿ ಪ್ರಧಾನ

Spread the loveವಿಕಲಚೇತನರನ್ನು ಆರ್ಥಿಕವಾಗಿ ಸ್ವಾಲವಂಬಿಗಳನ್ನಾಗಿ ಮಾಡಲು ಡಿಯಾಜಿಯೊ ಇಂಡಿಯಾ, ಅಂಗವಿಕಲ ವ್ಯಕ್ತಿಗಳ ಕೌಶಲ್ಯ ಮಂಡಳಿ ಸಹಭಾಗಿತ್ವದಲ್ಲಿ ಕೌಶಲ್ಯ ತರಬೇತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ