ಕಾಗವಾಡ ತಹಶೀಲ್ದಾರರಾಗಿ ರವೀಂದ್ರ ಅಧಿಕಾರ ಸ್ವೀಕಾರ
ವಿವಿಧ ಸರ್ಕಾರಿ ಕಟ್ಟಡಗಳ ಸ್ಥಳ ಮಂಜೂರಿಗಾಗಿ ಪ್ರಯತ್ನಕಾಗವಾಡ ತಹಶೀಲ್ದಾರರಾಗಿದ್ದ ರಾಜೇಶ ಬುರ್ಲಿ ಬೆಂಗಳೂರಿಗೆ ವರ್ಗಾವಣೆನೂತನ ತಹಶೀಲ್ದಾರರಾಗಿ ರವೀಂದ್ರ ಹಾದಿಮಾನಿ ಅಧಿಕಾರ ಸ್ವೀಕಾರಕಾಗವಾಡ ತಹಶೀಲ್ದಾರರಾಗಿ ಸೇವೆ ಸಲ್ಲಿಸುವ ಇಚ್ಛೆ ನನ್ನದಾಗಿತ್ತು:ರಾಜೇಶ ಬುರ್ಲಿ
ಹೊಸದಾಗಿ ರಚನೆಯಾದ ಕಾಗವಾಡ ತಾಲೂಕಿನ ತಹಶೀಲ್ದಾರರಾಗಿದ್ದ ರಾಜೇಶ ಬುರ್ಲಿ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ ನೂತನ ತಹಶೀಲ್ದಾರರಾಗಿ ಚನ್ನಮನ ಕಿತ್ತೂರು ತಹಶೀಲ್ದಾರ ರವೀಂದ್ರ ಹಾದಿಮನಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ಕಾಗವಾಡ ನೂತನ ತಾಲೂಕಾಗಿ ರಚನೆಗೊಂಡ ಬಳಿಕ ಇಲ್ಲಿಗೆ ಹೊಸ ಪ್ರಜಾಸೌಧ, ನ್ಯಾಯಾಲಯ ಸೇರಿದಂತೆ ಸರ್ಕಾರಿ ಕಟ್ಟಡಗಳ ಸ್ಥಳ ಮಂಜೂರಿಗಾಗಿ ವಿಶೇಷವಾಗಿ ಪ್ರಯತ್ನ ಮಾಡಿದ ತಹಶೀಲ್ದಾರರಾಗಿ ರಾಜೇಶ ಬುರ್ಲಿ ಸೇವೆ ಸಲ್ಲಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು ನೂತನ ತಹಶೀಲ್ದಾರ ರವೀಂದ್ರ ಹಾದಿಮನಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಮಯದಲ್ಲಿ ಮಾತನಾಡಿದ ರಾಜೇಶ ಬುರ್ಲಿ ಅವರು ಕಾಗವಾಡ ನೂತನ ತಾಲೂಕಿನ ತಹಶೀಲ್ದಾರರಾಗಿ ಸೇವೆ ಸಲ್ಲಿಸುವ ಇಚ್ಛೆ ನನ್ನದಾಗಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಇಲ್ಲಿಯ ಅಧಿಕಾರಿಗಳು, ಸ್ಥಳೀಯರು ಸಾಕಷ್ಟು ಸಹಕಾರ ನೀಡಿದ್ದಾರೆ ಎಂದರು.
ಕಾಗವಾಡ ಪ್ರವಾಸಿ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾರ್ವಜನಿಕರು, ಸನ್ಮಾನಿಸಿ, ಬಿಳ್ಕೋಟ್ಟರು. ಇದೇ ವೇಳೆ ನೂತನ ತಹಶೀಲ್ದಾರರಿಗೆ ಸನ್ಮಾನಿಸಿ, ಸ್ವಾಗತಿಸಿದರು.
ಈ ಸಮಯದಲ್ಲಿ ಗ್ರೇಡ್-2 ತಹಶೀಲ್ದಾರ ರಷ್ಮಿ ಜಕಾತೆ, ಉಪತಹಶೀಲ್ದಾರ ಅಣ್ಣಾಸಾಹೇಬ ಕೋರೆ, ಸಿಡಿಪಿಓ ಸಂಜೀವಕುಮಾರ ಸದಲಗಿ, ದಲಿತ ಮುಖಂಡ ಸಂಜಯ ತಳವಳಕರ, ರಮೇಶ ಚೌಗುಲೆ, ಶ್ರೀಶೈಲ ತುಗಶೆಟ್ಟಿ, ಕಾಕಾ ಪಾಟೀಲ, ಕೆ.ಆರ್. ಪಾಟೀಲ, ರಾಜುಗೌಡಾ ಪಾಟೀಲ, ಅಪ್ಪಾಸಾಬ ತೋಬರೆ, ಶಿರಿಷ ಪಾಟೀಲ, ಗೌಡಪ್ಪಾ ಸಡ್ಡಿ, ಶಿವಾನಂದ ನವಿನಾಳೆ, ಅಶೋಕ ನಾಂದಣಿ, ಸಚೀನ ಪಾಟೀಲ, ಕಿರಣ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.