ಬೆಂಗಳೂರು: ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ ಅದರ ಬೆನ್ನಲ್ಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧವೂ ಏಕವಚನದಲ್ಲೇ ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ರೈತ ಹೋರಾಟಗಾರ ಅಂತ ಹಸಿರು ಶಾಲು ಹಾಕಿಕೊಳ್ತಾನೆ. ಬಡವರ ಅಕ್ಕಿಯನ್ನ ಐದು ಕೆ.ಜಿ.ಗೆ ಇಳಿಸಿದ್ದಾನೆ. ಯಾಕೆ ಕಡಿಮೆ ಮಾಡಿದ್ರು, ಏನ್ ಅವರಪ್ಪನ ಮನೆಯಿಂದ ಕೊಡ್ತಿದ್ನಾ.. ಬಡವರ ಪರ ಹೃದಯವೇ ಇಲ್ಲದ ನಿಮ್ಮನ್ನ ಮನುಷ್ಯರು ಅಂತ ಕರೆಯಬೇಕಾ..? ಬಿಎಸ್‌ವೈ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಬಿಎಸ್‌ವೈ ವಿರುದ್ಧ ದಾಳಿ ನಡೆಸಿ.. ಈ ಹಿಂದೆ ನಾವು ಕೊಡ್ತಿದ್ದ 8 ಕೆ.ಜಿ. ಅಕ್ಕಿಯನ್ನ 5 ಕೆ.ಜಿ.ಗೆ ಇಳಿಸಿದ್ದಾರೆ. ಇತ್ತ ಇಂದಿರಾ ಕ್ಯಾಂಟೀನ್ಗಳನ್ನೂ ಮುಚ್ಚಲು ಹೊರಟಿರುವ ಸರ್ಕಾರ ಕ್ಯಾಂಟೀನ್ಗಳಿಗೆ ನೀಡಲಾಗಿದ್ದ ನೀರಿನ ಸಂಪರ್ಕವನ್ನ ಕಡಿತಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
Laxmi News 24×7