ಬೆಂಗಳೂರು: ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ಕರೆ ಮಾಡಿ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಮಾಡುವ ಪ್ರಸ್ತಾಪ ಮಾಡಿದ್ದರು ಅನ್ನೋ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ವಿಲೀನ ಆಗುತ್ತಾ ಅನ್ನೋ ಮಾತುಗಳು ಬಿಸಿಬಿಸಿಯಾಗಿ ಚರ್ಚೆಯಾಗುತ್ತಿವೆ.
ಈ ಬಗ್ಬಗ ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ಆಳವಾಗಿ ಮಾತನಾಡಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವಂತಹ ಪ್ರಯತ್ನ ಮಾಡಿದ್ರು. ಈ ಸಂದರ್ಭದಲ್ಲಿ ಮೋದಿ ಅವರೇ ಕುಮಾರಸ್ವಾಮಿಗೆ ಆಫರ್ ನೀಡಿದ್ರಂತೆ ಹೌದಾ? ಮಾಜಿ ಸಿಎಂ ಅವರನ್ನ ನ್ಯೂಸ್ಫಸ್ಟ್ ಪ್ರಶ್ನೆ ಮಾಡಿತು.
ಅದಕ್ಕೆ ಉತ್ತರಿಸಿದ ಹೆಚ್ಡಿಕೆ.. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಾತುಕತೆಗಳು ನಡೆದಿರೋದು ನಿಜ. ನಮ್ಮ ಮೆಲೆ ಮೋದಿ ಅವರು ಇಟ್ಟಿರುವ ವಿಶ್ವಾಸ, ಗೌರವ, ಅಭಿಮಾನವನ್ನ ಅಲ್ಲಗಳೆಯಲ್ಲ. ಈ ವಿಚಾರದಲ್ಲಿ ನಾನು ಕೃತಜ್ಞತೆಯನ್ನ ಮೋದಿಗೆ ಸಲ್ಲಿಸಬೇಕು. ನಮ್ಮಲ್ಲಿ ಆಗಿರುವ ಕೆಲವು ಎಮೋಷನಲ್ ತಪ್ಪುಗಳಿಂದಾಗಿ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕಾಯಿತು. ಈಗಲೂ ಮೋದಿ ಅವರು ನಮ್ಮೊಂದಿಗೆ ವಿಶ್ವಾಸದಿಂದ ಇದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಬೆಳವಣಿಗೆಗಳು ನಡೆಯಬಹುದು ಅಂತಾ ಸ್ಪಷ್ಟನೆ ನೀಡಿದ್ದಾರೆ.
Laxmi News 24×7