Breaking News

ಡಿಸೆಂಬರ್ 27ರಂದು ಮನ್​​ ಕೀ ಬಾತ್​ ಮುಗಿಯವ ತನಕ ಮನೆಯಲ್ಲಿ ತಟ್ಟೆ ಬಾರಿಸುವಂತೆ ರೈತರ ಕರೆ

Spread the love

ಡಿಸೆಂಬರ್ 27ರಂದು ಮನ್​​ ಕೀ ಬಾತ್​ ಮುಗಿಯವ ತನಕ ಮನೆಯಲ್ಲಿ ತಟ್ಟೆ ಬಾರಿಸುವಂತೆ ರೈತರ ಕರೆ

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಕಿಸಾನ್ ಯೂನಿಯನ್​​ ನಾಯಕ ಜಗಜಿತ್ ಸಿಂಗ್ ದಲೆವಾಲಾ, ಡಿಸೆಂಬರ್ 27 ರಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಊಟದ ತಟ್ಟೆಯನ್ನ ಹಿಡಿದು ಬಾರಿಸುವಂತೆ ಕರೆ ನೀಡುವಂತೆ ಕರೆ ಕೊಡುತ್ತಿದ್ದೇವೆ. ಅವರ ಭಾಷಣ ಮುಗಿಯುವವರೆಗೂ ರೈತರಿಗೆ ಬೆಂಬಲ ನೀಡುವ ಪ್ರತೀ ನಾಗರೀಕರೂ ತಟ್ಟೆಯನ್ನ ಬಾರಿಸಬೇಕು ಅಂತಾ ಮನವಿ ಮಾಡಿದ್ದಾರೆ.

ಜೊತೆಗೆ ಹರಿಯಾಣ ಟೋಲ್ ಪ್ಲಾಜ್​​ಗೆ ಡಿಸೆಂಬರ್ 25, 27 ರಂದು ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಅಂತಾ ತಿಳಿಸಿದೆ. ಇನ್ನು ಡಿಸೆಂಬರ್ 23 ರಂದು ಕಿಸಾನ್ ದಿವಸ್​ ಆಚರಿಸಲಾಗುತ್ತದೆ. ಆದರೆ ಈ ಬಾರಿ ಆದಿನವನ್ನ ಆಚರಿಸದಿರಲು ನಿರ್ಧರಿಸಲಾಗಿದೆ ಅಂತಾ ತಿಳಿಸಿದ್ದಾರೆ.

ಇನ್ನು ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ಮಾತನಾಡಿ.. ನಾಳೆ ನಾವು ಒಂದು ದಿನ ರೈತರಿಗೆ ಬೆಂಬಲ ಸೂಚಿಸಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಎಲ್ಲೆಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆಯೋ ಎಲ್ಲಾ ಕಡೆ ಹೋಗಿ ನಾವು ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹಾರಾಟ ಕಡಿಮೆ: ರಾಜ್ಯಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಆಕ್ರೋಶ

Spread the loveನವದೆಹಲಿ: ಕರ್ನಾಟಕದ ಎರಡನೇ ರಾಜಧಾನಿ ಎಂದೇ ಖ್ಯಾತವಾದ ಬೆಳಗಾವಿ  ನಗರವು ಶಿಕ್ಷಣ, ಉದ್ಯಮ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ