Breaking News

ಅಂಬೋಲಿ ಫಾಲ್ಸ್ ನಲ್ಲಿ ಕಾಲುಜಾರಿ 300 ಅಡಿ ಆಳಕ್ಕೆ ಬಿದ್ದು ಪ್ರವಾಸಿಗ ದುರ್ಮರಣ

Spread the love

ಅಂಬೋಲಿ ಫಾಲ್ಸ್ ನೋಡಲು ಬಂದಿದ್ದ ವ್ಯಕ್ತಿಯೋರ್ವ ಕಾಲುಜಾರಿ 300 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಮಹಾರಾಷ್ಟ್ರ-ಬೆಳಗಾವಿ ಗಡಿಯಲ್ಲಿರುವ ಅಂಬೋಲಿ ಫಾಲ್ಸ್ ನ ಕವಲೇಸಾದ್ ಪಾಯಿಂಟ್ ನಲ್ಲಿ ಈ ಘಟನೆ ನಡೆದಿದೆ. ಕೊಲ್ಹಾಪುರ ಮೂಲದ ಬಾಲಸೋ ಸಂಗರ್ (45) ಮೃತ ದುರ್ದೈವಿ.

ಸ್ನೇಹಿತರೊಂದಿಗೆ ಅಂಬೋಲಿ ಫಾಲ್ಸ್ ಗೆ ಬಂದಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ 300 ಅಡಿ ಆಳಕ್ಕೆ ಬಿದ್ದು ನಾಪತ್ತೆಯಾಗಿದ್ದರು. ಸ್ಥಳಕ್ಕಾಗಿಸಿದ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿದ್ದು, ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆಮೃತದೇಹವನ್ನು ಕಣಿವೆಯಿಂದ ಮೇಲಕೆತ್ತಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳು ಬೋರ್ಗರೆದು ಧುಮ್ಮಿಕ್ಕಿ ಹರಿಯುದರಿಂದ ಜಲಪಾತಗಳನ್ನು ನೋಡಲು ಪ್ರವಾಸಗರು ತೆರಳುತ್ತಾರೆ. ಅಪಾಯದ ಸ್ಥಳಗಳಲ್ಲಿ ನಿರ್ಬಂಧವಿದ್ದರೂ ಲೆಕ್ಕಿಸದೇ ಹೋಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಅಂತದ್ದೇ ದುರಂತ ಇದೀಗ ಅಂಬೋಲಿ ಫಾಲ್ಸ್ ನಲ್ಲಿ ನಡೆದಿದೆ.


Spread the love

About Laxminews 24x7

Check Also

ವಿಕಲಚೇತನ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ: 100 ವಿಕಲಚೇತನರಿಗೆ ಪದವಿ ಪ್ರಧಾನ

Spread the loveವಿಕಲಚೇತನರನ್ನು ಆರ್ಥಿಕವಾಗಿ ಸ್ವಾಲವಂಬಿಗಳನ್ನಾಗಿ ಮಾಡಲು ಡಿಯಾಜಿಯೊ ಇಂಡಿಯಾ, ಅಂಗವಿಕಲ ವ್ಯಕ್ತಿಗಳ ಕೌಶಲ್ಯ ಮಂಡಳಿ ಸಹಭಾಗಿತ್ವದಲ್ಲಿ ಕೌಶಲ್ಯ ತರಬೇತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ