ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಲಾಗಿದೆ ಅಂತಾ ಜನ ನಂಬಿದ್ದರು,ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬಹುದೆಂಬ ಅತೀವ ಆತ್ಮವಿಶ್ವಾಸ ಜನರಿಗೆ ಇತ್ತು ಆದ್ರೆ ಸುವರ್ಣಸೌಧ ನಿರ್ಮಿಸಿದ ಉದ್ದೇಶ ಇನ್ನುವರೆಗೆ ಈಡೇರಿಲ್ಲ ಎಂದು ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮೀತಿಯ ಅದ್ಯಕ್ಚ ಅಶೋಕ ಪೂಜಾರಿ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಸರ್ಕಾರ ಬೆಳಗಾವಿಯ ಸುವರ್ಣಸೌಧದಲ್ಲಿ, ಅಧಿವೇಶನ ನಡೆಸುತ್ತಿಲ್ಲ,ಈ ಸುವರ್ಣಸೌಧದಲ್ಲಿ ಲೈಟ್ ಹಚ್ಚೋರು ಗತಿ ಇಲ್ಲ,ಸುವರ್ಣಸೌಧ ಉತ್ತರ ಕರ್ನಾಟಕ ಆಡಳಿತಾತ್ಮಕ ಶಕ್ತಿ ಕೇಂದ್ರ ಆಗುವ ಕನಸು ಭಗ್ನವಾಗಿದೆ. ಸರ್ಕಾರ ಸುವರ್ಣಸೌಧಕ್ಕೆ ಶಕ್ತಿ ತುಂಬುವ ಕೆಲಸ ಮಾಡದಿದ್ದರೆ,ಉತ್ತರ ಕರ್ನಾಟಕದ ಅಭಿವೃದ್ಧಿಯ ಚಿಂತನೆ ಮಾಡದಿದ್ದರೆ,ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಚಳುವಳಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತದೆ ಎಂದು ಅಶೋಕ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಹದಿನೈದು ದಿನಗಳಲ್ಲಿ ಉತ್ತರ ಕರ್ನಾಟಕದ ಎಲ್ಲ ಸಂಘಟನೆಗಳ ಸಭೆ ಕರೆಯುತ್ತೇವೆ.ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಹೋರಾಟದ ರೂಪರೇಷೆಗಳನ್ನು ತೀರ್ಮಾಣಿಸುತ್ತೇವೆ.ಎಂದು ಅಶೋಕ ಪೂಜಾರಿ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳ ಸ್ಥಳಾಂತರ ಮಾಡಬೇಕೆಂದು ಮಠಾಧೀಶರ ನೇತ್ರತ್ವದಲ್ಲಿ ಧರಣೆ ಮಾಡಿದ ಸಂಧರ್ಭದಲ್ಲಿ, ಬಿ.ಎಸ್ ಯಡಿಯೂರಪ್ಪ ಅವರು ಈ ಧರಣಿಯಲ್ಲಿ ಪಾಲ್ಗೊಂಡು,ನಾನು ಮುಖ್ಯಮಂತ್ರಿ ಆದ್ರೆ, ಕಚೇರಿಗಳನ್ನು ಸ್ಥಳಾಂತರ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು,ಆದ್ರೆ ಬಿ.ಎಸ್ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ.ಎಂದು ಅಶೋಕ ಪೂಜಾರಿ ಆರೋಪಿಸಿದರು.
ಗೋಕಾಕ್ ಕ್ಷೇತ್ರದಲ್ಲಿ ದಬ್ಬಾಳಿಕೆ ,ಅನ್ಯಾಯ,ಗುಂಡಾಗಿರಿ ಮುಂದುವರೆದಿದೆ. ಅಂಕಲಗಿಯಲ್ಲಿ ನಡೆದ ಘಟನೆಯ ಕುರಿತು,ಪೋಲೀಸರು ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಅಶೋಕ ಪೂಜಾರಿ ಒತ್ತಾಯಿಸಿದ್ದಾರೆ.
Laxmi News 24×7