Breaking News

ಬೆಳಗಾವಿ ಮಾರ್ಕಂಡೇಯ ನಗರದಲ್ಲಿ ಚರಂಡಿಗಳ ಸ್ವಚ್ಛತೆ

Spread the love

ಬೆಳಗಾವಿ ಮಾರ್ಕಂಡೇಯ ನಗರದಲ್ಲಿ ಚರಂಡಿಗಳ ಸ್ವಚ್ಛತೆ
ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಚರಂಡಿಗಳ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಮಾಜಿ ಉಪಮಹಾಪೌರ ಹಾಗೂ ಹಾಲಿ ನಗರಸೇವಕಿ ರೇಷ್ಮಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಇಂದು ಬೆಳಗಾವಿಯ ಮಾರ್ಕಂಡೇಯ ನಗರದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಚರಂಡಿಗಳ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.
ಚರಂಡಿಗಳಿಗೆ ಕಸ ಎಸೆದರೆ ನದಿ, ಕಾಲುವೆಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡಬಹುದು ಎಂಬುದನ್ನು ಮನವರಿಕೆ ಮಾಡುತ್ತ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ನಿರಂತರ ಮುಂದಾಗಿದ್ದಾರೆ.
ಮನೆ ಬಾಗಿಲಿಗೆ ಬರುವ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ತ್ಯಾಜ್ಯ ವಿತರಿಸಬೇಕು, “ಗ್ರಾಮ ಪಂಚಾಯಿತಿಯು ಜನಸಂಖ್ಯೆಗೆ ಅನುಗುಣವಾಗಿ ತ್ಯಾಜ್ಯ ವಿಲೇವಾರಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಈ ಮೂಲಕ ಪರಿಸರದ ಶುಚಿತ್ವವನ್ನು ಕಾಪಾಡಲು ಸಹಕಾರ ದೊರೆಯುತ್ತದೆ,” ಎಂದು ಸಮಾಜ ಸೇವಕ ಆದಿತ್ಯ ಪಾಟೀಲ್ ಹೇಳಿದರು.

Spread the love

About Laxminews 24x7

Check Also

ಬೆಳಗಾವಿ: ಒಂದೇ ವರ್ಷದಲ್ಲಿ ಅಪಘಾತಕ್ಕೆ 800 ಬಲಿ

Spread the loveಬೆಳಗಾವಿ: ಜಿಲ್ಲೆಯಲ್ಲಿ ಚಾಲಕರ ರ್ನಿಲಕ್ಷ$್ಯ ಮದ್ಯಸೇವನೆ ಮಾಡಿ ವಾಹನ ಚಲಾವಣೆ, ಅತಿಯಾದ ವೇಗ ಹೀಗೆ ವಿವಿಧ ಕಾರಣಗಳಿಂದ ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ