ಜಕಾರ್ತ, ಡಿ.20- ಮಹಾಮಾರಿ ಕೊರೊನಾಗೆ ಔಷ ಸಿಕ್ಕಿದೆ. ವಿಶ್ವಕ್ಕೆ ಎದುರಾಗಿರುವ ಕಂಟಕ ಮುಕ್ತಿ ದೊರೆಯಲಿದೆ ಎಂಬ ಆಶಾದಾಯಕ ಬೆಳವಣಿಗೆಯ ನಡುವೆಯೇ ಲಸಿಕೆ ತಯಾರಿಕೆಗೆ ಬಳಕೆ ಮಾಡಲಾಗಿರುವ ಅಂಶಗಳು ಧಾರ್ಮಿಕ ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ.
ಇಂಡೋನೇಷ್ಯಾದ ರಾಜ ತಾಂತ್ರಿಕರು ಮತ್ತು ಇಸ್ಲಾಂ ಧಾರ್ಮಿಕ ಗುರುಗಳು ಅಲ್ಲಿ ಔಷಧ ತಯಾರಿಕೆಯ ಪ್ರಕ್ರಿಯೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಆನಂತರ ಇಂಡೋನೇಷ್ಯಾಗೆ ಲಕ್ಷ ಗಟ್ಟಲೆ ಔಷಯ ಡೋಸೇಜ್‍ಗಳನ್ನು ಕಳುಹಿಸಲಾಗಿದೆ.
ಕೊರೊನಾ ಲಸಿಕೆ ಉತ್ಪಾದಕ ಕಂಪೆನಿಗಳು ಸುರಕ್ಷತೆ , ಸಾಗಾಣಿಕೆ ಮತ್ತು ಸಂಗ್ರಹಣೆಯ ದೃಷ್ಟಿಯಿಂದಾಗಿ ಹಂದಿ ಮಾಂಸದಿಂದ ತಯಾರಿಸಲಾದ ಜಿಲಾಟಿನ್ ಉತ್ಪನ್ನವನ್ನು ಬಳಕೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಕೆಲವು ಧಾರ್ಮಿಕ ಗುಂಪುಗಳ ವಿರೋಧಕ್ಕೆ ಕಾರಣವಾಗಿದೆ. ಹಂದಿ ಮಾಂಸದ ಅಂಶಗಳಿಂದ ಉತ್ಪಾದನೆಯಾದ ಲಸಿಕೆಗಳನ್ನು ತಿರಸ್ಕರಿಸುವಂತೆ ಕೆಲವು ಧಾರ್ಮಿಕ ಮುಖಂಡರುಗಳು ಕರೆ ನೀಡಿದ್ದಾರೆ.
ಈ ಹಿಂದೆ ಇಂಡೋನೇಷ್ಯಾದಲ್ಲಿ ದಡಾರಾ ಮತ್ತು ರುಬೆಲ್ಲಾ ಲಸಿಕೆಗಳನ್ನು ಜಿಲಾಟಿನ್ ಅಂಶಗಳನ್ನು ಹೊಂದಿರುವ ಕಾರಣಕ್ಕಾಗಿ ಅಲ್ಲಿನ ಧಾರ್ಮಿಕ ಸಂಘಟನೆಗಳು ನಿಷೇಸಿದ್ದವು.ನಂತರದ ಬೆಳವಣಿಗೆಯಲ್ಲಿ ಇಂಡೋನೇಷ್ಯಾದಲ್ಲಿ ದಡಾರಾ ಪ್ರಕರಣಗಳು ಹೆಚ್ಚಾದವು. ಈಗ ವಿಶ್ವದಲ್ಲೇ ಹೆಚ್ಚು ದಡಾರಾ ಪ್ರಕರಣ ಹೊಂದಿರುವ ರಾಷ್ಟ್ರ ಇಂಡೋನೇಷ್ಯಾವಾಗಿದೆ.
Laxmi News 24×7