Breaking News

ಬೆಳಗಾವಿ ಅಂಚೆ ಇಲಾಖೆಯಿಂದ ಎಪಿಟಿ 2.0 ಸೇವೆ ಆರಂಭ…

Spread the love

ಬೆಳಗಾವಿ ಅಂಚೆ ಇಲಾಖೆಯಿಂದ ಎಪಿಟಿ 2.0 ಸೇವೆ ಆರಂಭ…
ಇನ್ಮುಂದೆ ಗ್ರಾಹಕರಿಗೆ ತ್ವರಿತಗತಿಯಲ್ಲಿ ಸಿಗಲಿವೆ ಆನ್’ಲೈನ್ ಸೇವೆಗಳು
ಭಾರತೀಯ ಅಂಚೆ ಇಲಾಖೆಯೂ ಭಾರತಾದ್ಯಂತ ಗ್ರಾಹಕರಿಗೆ ಶೀಘ್ರಗತಿಯಲ್ಲಿ ಸೇವೆಯನ್ನು ನೀಡುವ ಉದ್ಧೇಶದಿಂದ ಅಡ್ವಾನ್ಸ್ ಪೋಸ್ಟಲ್ ಟೆಕ್ನಾಲಜಿ 2.0 ಜಾರಿಗೊಳಿಸಿದ್ದು, ಇಂದು ಬೆಳಗಾವಿಯ ಪ್ರಧಾನ ಅಂಚೆ ಕಾರ್ಯಾಲಯದಲ್ಲಿ ಈ ನೂತನ ಸೇವೆಯನ್ನು ಆರಂಭಿಸಲಾಯಿತು.
ಇಂದು ಬೆಳಗಾವಿ ಪ್ರಧಾನ ಅಂಚೆ ಕಾರ್ಯಾಲಯದಲ್ಲಿ ಬೆಳಗಾವಿ ಪ್ರಧಾನ ಅಂಚೆ ಕಾರ್ಯಾಲಯದ ಅಧೀಕ್ಷಕರಾದ ಎಸ್.ಕೆ. ಮುರನಾಲ್, ಸಹಾಯಕ ಅಧೀಕ್ಷಕರಾದ ಎಸ್.ಡಿ. ಕಾಕಡೆ, ಬಿ.ಪಿ ಮಾಳಗೆ, ಪೋಸ್ಟ್ ಮಾಸ್ಟರ್ ಲಕ್ಷ್ಮಣ ಚಾವಡಿಮನಿ ಸೇರಿದಂತೆ ಇನ್ನುಳಿದ ಗಣ್ಯರು ಎಪಿಟಿ 2.0 ಸೇವೆಯನ್ನು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಇನ್ ನ್ಯೂಸ್’ಗೆ ಮಾಹಿತಿಯನ್ನು ನೀಡಿದ, ಪ್ರಧಾನ ಅಂಚೆ ಕಾರ್ಯಾಲಯದ ಅಧೀಕ್ಷಕರಾದ ಎಸ್.ಕೆ. ಮುರನಾಲ್ ಅವರು, ಬೆಳಗಾವಿ ಪ್ರಧಾನ ಅಂಚೆ ಕಾರ್ಯಾಲಯದಲ್ಲಿ ಅಡ್ವಾನ್ಸ್ ಪೋಸ್ಟಲ್ ಟೆಕ್ನಾಲಜಿ 2.0 ಉದ್ಘಾಟನೆಯನ್ನು ಗ್ರಾಹಕರ ಸಮ್ಮುಖದಲ್ಲಿ ಮಾಡಲಾಗಿದ್ದು, ಇದು ಅಂಚೆ ಸೇವೆಯನ್ನು ಗ್ರಾಹಕರಿಗೆ ಉನ್ನತಮಟ್ಟದಲ್ಲಿ ನೀಡಲು ಸಹಕಾರಿಯಾಗಿದೆ. ಅಂಚೆ ಚೀಟಿಗಳು ಸರಿಯಾದ ಸಮಯಕ್ಕೆ ತಲುಪಲು ಇದು ಆನಲೈನ್ ಸೇವೆಯನ್ನು ಒದಗಿಸುತ್ತದೆ.
ತ್ವರಿತಗತಿಯಲ್ಲಿ ಎಲ್ಲ ವ್ಯವಹಾರಗಳನ್ನು ಮಾಡಲು ಗ್ರಾಹಕರಿಗೆ ಅನುಕೂಲವಾಗಲಿದೆ. ಅಲ್ಲದೇ ಕ್ಯೂಆರ್ ಕೋಡ್ ಪೇಮೆಂಟ್, ಸ್ಪೀಡ್ ಪೋಸ್ಟ್, ಇಂಟರನ್ಯಾಷನಲ್ ಮೇಲ್ ಸೇರಿದಂತೆ ಇನ್ನುಳಿದ ಸೇವೆಗಳನ್ನು ಆಧುನಿಕವಾಗಿ ನೀಡುತ್ತದೆ. ಧಾರವಾಡ ಮತ್ತು ಬೈಲಹೊಂಗಲ ಪ್ರಧಾನ ಅಂಚೆ ಕಾರ್ಯಾಲಯದಲ್ಲಿಯೂ ನಾಳೆ ಈ ಸೇವೆ ಆರಂಭಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಹಕರು, ಅಂಚೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ

Spread the love ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ