ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ್ ಹಾಗೂ ಕೆಎಂಸಿಆರ್‌ಐ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ್ ಜತೆಗೂಡಿ ಲಂಡನ್‌ನಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಭಾರತದ 6 ಜನರ ತಂಡ ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯದ ವಿಶ್ವದ ಅತಿ ಕ್ಲಿಷ್ಟಕರವಾದ ಇಂಗ್ಲಿಷ್ ಕಾಲುವೆ ಈಜುವ ಮೂಲಕ ಮೈಲಿಗಲ್ಲು ಸಾಧಿಸಿದ್ದಾರೆ.
ಸಮುದ್ರದಲ್ಲಿ 13 ಡಿಗ್ರಿ ಸೆಲ್ಸಿಯಸ್ ತಂಪು ವಾತಾವರಣ. ಅತಿಯಾದ ಅಲೆಗಳ ನಡುವೆ 48.3 ಕಿ.ಮೀ. ಅನ್ನು 13.37 ಗಂಟೆಗಳಲ್ಲಿ ಈಜಿ ಅದ್ಭುತ ಸಾಧನೆ ಮಾಡಿದ್ದಾರೆ.
Laxmi News 24×7