ಧಾರವಾಡದಲ್ಲಿ ಭಾರಿ ಮಳೆಯಿಂದ ನೆನೆದ ಮನೆಗೋಡೆ ಕುಸಿತ…
ತಪ್ಪಿದ ಭಾರಿ ಅನಾಹುತ. ಧಾರವಾಡ ಸೈದಾಪುರದಲ್ಲಿ ಘಟನೆ..
ಧಾರವಾಡದಲ್ಲಿ ಇತ್ತಿಚ್ಚೆಗೆ ಸುರಿದ ಭಾರಿ ಮಳೆಯಿಂದ ಮನೆಗೋಡೆ ನೆನೆದು ಕುಸಿದು ಬಿದ್ದಿದ್ದು, ಬಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಹೌದು ಧಾರವಾಡದ ಸೈದಾಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ರಾಮಣ್ಣ ಅಗಡಿ ಎಂಬುವವರಿಗೆ ಸೇರಿದ ಮನೆಯೆ ಗೋಡೆಯೇ ಕುಸಿದು ಬಿದ್ದಿದೆ. ನಿರಂತರ ಸುರಿದ ಮಳೆಗೆ ಮನೆಯ ಗೋಡೆ ನೆನೆದಿತ್ತು.
ಇದ್ದಕ್ಕಿದ್ದಂತೆ ಗೋಡೆ ಕುಸಿದು ಬಿದ್ದಿದೆ. ಗೋಡೆ ಬಿದ್ದ ಸದ್ದಿಗೆ ಮನೆಯ ಸದಸ್ಯರೆಲ್ಲ ಹೊರಗಡೆ ಓಡಿ ಬಂದಿದ್ದಾರೆ. ಇದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Laxmi News 24×7