ಹುಬ್ಬಳ್ಳಿ: ಬಂಗಾರಕ್ಕೆ ಹಾಲ್ ಮಾರ್ಕ್ ಹಾಕಿ ಕೊಡುತ್ತೇನೆ, ಕಲರ್ ಪಾಲೀಷ್ ಮಾಡುತ್ತೇನೆ ಎಂದು ಹೇಳಿ ಮೋಸ ಮಾಡುತ್ತಿದ್ದ ವಂಚಕನನ್ನು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಸುನಿಲ್ ಪತ್ತಾರ ಎಂದು ಗುರುತಿಸಲಾಗಿದೆ. ಈತ ನನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುನಿಲ್ ಪತ್ತಾರ ಸಾರ್ವಜನರಿಕರನ್ನು ನಂಬಿಸಿ ಬಂಗಾರಕ್ಕೆ ಹಾಲ್ ಮಾರ್ಕ್ ಹಾಕಿ ಕೊಡುತ್ತೇನೆ. ಕಲರ್ ಪಾಲೀಷ್ ಮಾಡುತ್ತೇನೆ ಅಂತ ಮೋಸ ಮಾಡುತ್ತಿದ್ದ. ವಂಚಕನ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನಲೆಯಲ್ಲಿ ಖಚಿತ ಮಾಹಿತಿ ಮೇರಗೆ ದಾಳಿ ನಡೆಸಿದ ಪೊಲೀಸರು ಚಿನ್ನಾಭರಣ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಇದೀಗ ಬಂಧಿತ ಆರೋಪಿ ಸುನಿಲ್ ನಿಂದ 20 ಲಕ್ಷ ಮೌಲ್ಯದ 330 ಗ್ರಾಂ ಚಿನ್ನಾಭರಣ ಹಾಗೂ 3.56 ಲಕ್ಷ ನಗದನ್ನು ಜಪ್ತಿ ಮಾಡಲಾಗಿದೆ.
Laxmi News 24×7