ಬೆಂಗಳೂರು: ಹತ್ಯೆಗೆ ಯತ್ನಿಸಿದ ರೌಡಿಶೀಟರನ್ನು ತಾನೇ ಹತ್ಯೆಗೈದಿದ್ದ ವ್ಯಕ್ತಿ ಸಹಿತ ನಾಲ್ವರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೂನ್ 10ರಂದು ರಾತ್ರಿ ಕಾಡುಗೋಡಿಯ ವಿಜಯಲಕ್ಷ್ಮಿ ಲೇಔಟ್ನಲ್ಲಿ ಪುನೀತ್ (25) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಮಹೇಶ್, ಶ್ರೀಕಾಂತ್, ರಾಜೇಶ್ ಮತ್ತು ಸುಮಂತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ ಯತ್ನಿಸಿ ತಾನೇ ಬಲಿಯಾದ ರೌಡಿಶೀಟರ್: ರೌಡಿಶೀಟರ್ ಪುನೀತ್, ಆರೋಪಿ ಮಹೇಶ್ ಬಳಿ 40 ಸಾವಿರಕ್ಕೆ ಮಾತನಾಡಿ ಬೈಕ್ವೊಂದನ್ನು ಖರೀದಿಸಿದ್ದ. ಆದರೆ, ದಿನ ಕಳೆದಂತೆ ಹಣ ನೀಡದೇ ಸತಾಯಿಸಲಾರಂಭಿಸಿದ್ದ. ಕೊನೆಗೆ ಹಣ ಕೊಡುವುದಿಲ್ಲ ಎಂದಿದ್ದ ಪುನೀತ್, “ನಾನು ಕೇಳಿದಾಗ ನೀನೇ ಹಣ ಕೊಡಬೇಕು, ಇಲ್ಲದಿದ್ದರೆ ನಿನ್ನ ಮಗಳನ್ನ ಅಪಹರಿಸುತ್ತೇನೆ” ಎಂದು ಬೆದರಿಸಲಾರಂಭಿಸಿದ್ದ. ಸಹವಾಸವೇ ಬೇಡ ಎಂದುಕೊಂಡ ಮಹೇಶ್, ಪುನೀತ್ಗೆ ಪರಿಚಯ ಇರುವ ತನ್ನ ಸ್ನೇಹಿತ ಶ್ರೀಕಾಂತ್ ಮೂಲಕ ಮಾತನಾಡಿಸಿ ರಾಜಿ ಸಂಧಾನ ಮಾಡಿಕೊಳ್ಳಲು ಯತ್ನಿಸಿದ್ದ.
Laxmi News 24×7