Breaking News

ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ…ಧರ್ಮದಲ್ಲಾಗಲಿ ನಂಬಿಕೆಯಿಲ್ಲ…

Spread the love

ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ…ಧರ್ಮದಲ್ಲಾಗಲಿ ನಂಬಿಕೆಯಿಲ್ಲ…
ಸುಳ್ಳು ಹಬ್ಬಿಸುತ್ತ ಕೆಟ್ಟ ವಾತಾವರಣ ನಿರ್ಮಿಸುವುದೇ ಅವರ ಕೆಲಸ; ಸಚಿವ ಆರ್.ಬಿ. ತಿಮ್ಮಾಪೂರ
ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ, ಧರ್ಮದ ವಿಚಾರದಲ್ಲಾಗಲಿ ನಂಬಿಕೆಯಿಲ್ಲ.
ಸುಳ್ಳುಗಳನ್ನೇ ಹಬ್ಬಿಸುತ್ತ ಹೋಗುತ್ತಾರೆ. ಕೆಟ್ಟ ವಾತಾವರಣ ನಿರ್ಮಾಣ ಮಾಡುವಂತ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಆರ್.ಸಿ.ಬಿ ಟ್ರಾಫಿ ಗೆದ್ದ ವಿಚಾರವಾಗಿ 17 ವರ್ಷಗಳ ನಂತರ ಚಾಂಪಿಯನ್ ಆಗಿದ್ದು, ಹೆಮ್ಮೆಯ ವಿಷಯ.
ಅಭಿಮಾನಿಗಳ ಜೊತೆ ನಾನು ಕೂಡ ಸೆಲೆಬ್ರೇಶನ್ ಮಾಡಿದ್ದೇನೆ. ಆರ್.ಸಿ.ಬಿ ಚಾಂಪಿಯನ್ ಆದ ಬೆನ್ನಲ್ಲೇ ಮದ್ಯದ ಮಾರಾಟದಲ್ಲಿ ದಾಖಲೆ ಆಗಿದೇಯಾ ಎಂಬ ಪ್ರಶ್ನೆಗೆ ಮಾರಾಟದ ಬಗ್ಗೆ ಆಮೇಲೆ ಅಂಕಿ ಅಂಶವನ್ನು ತೆಗೆದುಕೊಂಡು ಮಾಹಿತಿ ಕೊಡುತ್ತೇನೆ ಎಂದರು.
ಮಂಗಳೂರು ಕೋಮು ಗಲಾಟೆಯಲ್ಲಿ ಪ್ರಕರಣದಲ್ಲಿ ಹಿಂದುಗಳನ್ನು ಟಾರ್ಗೆಟ್ ಮಾಡ್ತಿದಾರೆ ಎಂಬ ಬಿಜೆಪಿಗರ ಆರೋಪ ವಿಚಾರಕ್ಕೆ ಬಿಜೆಪಿಗರು ಯಾವಾಗಲೂ ಇಂತಹುದನ್ನೇ ಮಾಡುತ್ತಾ ಬಂದಿದ್ದಾರೆ.
ಬಿಜೆಪಿಗರಿಗೆ ನ್ಯಾಯದಲ್ಲಿ ಯಾವುದೇ ನಂಬಿಕೆ ಇಲ್ಲ, ಸಂವಿಧಾನದಲ್ಲೂ ಕೂಡ ನಂಬಿಕೆ ಇಲ್ಲ. ಧರ್ಮದ ವಿಚಾರದಲ್ಲೂ ಕೂಡ ಬಿಜೆಪಿಗರಿಗೆ ನಂಬಿಕೆ ಇಲ್ಲ.
ಬಿಜೆಪಿಯವರು ಸುಳ್ಳುಗಳನ್ನೇ ಹಬ್ಬಿಸುತ್ತ ಹೋಗುತ್ತಾರೆ. ಇಡೀ ಮಂಗಳೂರೇ ಹೊತ್ತಿ ಉರಿತಾ ಇದೆ, ಇದನ್ನು ಶಮನ ಮಾಡುವುದನ್ನು ಬಿಟ್ಟು ಅದಕ್ಕೆ ತುಪ್ಪವನ್ನು ಸುರಿವಂತ ಕೆಲಸ ಬಿಜೆಪಿಗರು ಮಾಡುತ್ತಿದ್ದಾರೆ ಎಂದರು.
ಇನ್ನು, ಉದ್ವಿಗ್ನತೆಯನ್ನು ಎತ್ತಿ ಹಿಡಿಯುವಂತ ಕೆಲಸ ಮಾಡುತ್ತಿರುವ ಬಿಜೆಪಿಗರು ಎಷ್ಟು ದುರ್ಬಲರು ಎಂಬುದನ್ನು ಎತ್ತಿ ತೋರಿಸುತ್ತದೆ. ಕೆಟ್ಟ ವಾತಾವರಣ ನಿರ್ಮಾಣ ಮಾಡುವಂತ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ.
ಹಿಂದೂ ಮುಸ್ಲಿಂ ಪದ ಬಳಸಿಕೊಂಡೆ ಚುನಾವಣೆ ಮಾಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣವೇ ಮುಸ್ಲಿಂ ಮುಸ್ಲಿಂ ಎಂದು ಧ್ಯಾನ ಮಾಡುತ್ತಾರೆ. ಮುಸ್ಲಿಮರ ಧ್ಯಾನದಲ್ಲಿ ಇವರು ಲಾಭವನ್ನು ಪಡೆದುಕೊಳ್ಳುತ್ತಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ದ್ವೇಷ ಹುಟ್ಟಿಸುವಂತಹ ಕುತಂತ್ರವಾದಿಗಳಿವ್ರು. ಬಿಜೆಪಿಗರಿಗೆ ಶಾಂತಿನೂ ಬೇಡ ಧರ್ಮನೂ ಬೇಡ. ಹಿಂದೂ ಧರ್ಮದಲ್ಲಿರುವಂತ ಅನೇಕ ವಿಚಾರಗಳು ಬಿಜೆಪಿಗರಿಗೆ ಗೊತ್ತಿಲ್ಲ ಎಂದರು.

Spread the love

About Laxminews 24x7

Check Also

ಖಮೇನಿ ಹತ್ಯೆ ಪ್ರತಿಭಟನೆಗಳ ಬಗ್ಗೆ ಪೋಸ್ಟ್‌ – ಕಾಶ್ಮೀರ ಸಂಸದರ ವಿರುದ್ಧ ಎಫ್‌ಐಆರ್‌

Spread the loveಶ್ರೀನಗರ: ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ  ಹತ್ಯೆ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ