Breaking News

ರೈಲ್ವೆ ಪ್ಲಾಟ್‍ಫಾರಂ ಟಿಕೆಟ್ ದರ ಹೆಚ್ಚಳಕ್ಕೆ ವ್ಯಾಪಕ ಆಕ್ರೋಶ

Spread the love

ಬೆಂಗಳೂರು, ಡಿ.17- ರೈಲಿನಲ್ಲಿ ಹೋಗುವವರನ್ನು ಬೀಳ್ಕೊಡಲು ಅಪ್ಪಿತಪ್ಪಿಯೂ ರೈಲ್ವೆ ನಿಲ್ದಾಣಗಳತ್ತ ತಲೆ ಹಾಕಬೇಡಿ. ಏಕೆಂದರೆ, ಬೆಂಗಳೂರಿನ ಪ್ರಮುಖ ರೈಲ್ವೆ ಪ್ಲಾಟ್‍ಫಾರಂಗಳ ಟಿಕೆಟ್ ದರವನ್ನು ಐದು ಪಟ್ಟು ಹೆಚ್ಚಿಸಲಾಗಿದೆ.  ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಕಂಟೋನ್ಮೆಂಟ್, ಯಶವಂತಪುರ, ಕೆಂಗೇರಿ, ಕೆಆರ್ ಪುರಂ, ಬಾಣಸವಾಡಿ, ಯಲಹಂಕ, ವೈಟ್‍ಫೀಲ್ಡ್, ಬೆಂಗಳೂರು ಹೊರತುಪಡಿಸಿ ಬಂಗಾರಪೇಟೆ, ತುಮಕೂರು, ಹೊಸೂರು, ಮಂಡ್ಯ ರೈಲ್ವೆ ನಿಲ್ದಾಣಗಳ ಪ್ಲಾಟ್‍ಫಾರಂ ಟಿಕೆಟ್‍ಗಳನ್ನು 10ರೂ.ನಿಂದ 50ರೂ.ಗೆ ಹೆಚ್ಚಿಸಲಾಗಿದೆ.

ಇದು ನವೆಂಬರ್ 30 ರಿಂದ ಡಿಸೆಂಬರ್ 31ರ ವರೆಗೆ ಮುಂದುವರಿಯಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆಯಾದರೂ ಲಾಕ್‍ಡೌನ್ ಕೊನೆಗೊಳ್ಳುವವರೆಗೂ ಜಾರಿಯಲ್ಲಿರುವ ಶಂಕೆ ವ್ಯಕ್ತವಾಗಿದೆ. ಕೊರೊನಾ ಕಾಲದಲ್ಲಿ ಜನಸಂದಣಿ ತಪ್ಪಿಸಲು ಪ್ಲಾಟ್‍ಫಾರಂಗಳಲ್ಲಿ ಅನಗತ್ಯವಾಗಿ ಜನ ತುಂಬುವುದನ್ನು ಕಡಿಮೆ ಮಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.ರೈಲ್ವೆ ಇಲಾಖೆಯ ಈ ನಿರ್ಧಾರಕ್ಕೆ ವ್ಯಾಪಕ ಆಕ್ರೋಶಗಳು ಕೇಳಿಬಂದಿವೆ. ಕೇವಲ ಎರಡು ಗಂಟೆಯ ಕಾಲಾವಧಿಯ ಪ್ಲಾಟ್‍ಫಾರಂ ಟಿಕೆಟ್‍ಗೆ 50ರೂ. ವಸೂಲಿ ಮಾಡುತ್ತಿರುವುದು ಅನ್ಯಾಯ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ