Breaking News

ಗ್ರಾಮ ಪಂಚಾಯಿತಿ ಚುನಾವಣೆ ಗುಂಡು ಹಾಗೂ ತುಂಡುಗಳ ಪಾರ್ಟಿಗಳನ್ನು ಜೋರ: ಮದ್ಯ ಮಾರಾಟದಲ್ಲಿ ಶೇ.125ರಷ್ಟು ಏರಿಕೆ..!

Spread the love

ಬೆಂಗಳೂರು,ಡಿ.17- ಗ್ರಾಮ ಪಂಚಾಯಿತಿ ಚುನಾವಣೆ ದಿನಕಳೆದಂತೆ ರಂಗೇರುತ್ತಿದ್ದು, ಮತದಾರರ ಮನಗೆಲ್ಲಲು ಸಾಕಷ್ಟು ಕಣದಲ್ಲಿರುವ ಅಭ್ಯರ್ಥಿಗಳು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಕಾರ್ಯಕರ್ತರು, ಬೆಂಬಲಿಗರಿಗಾಗಿ ಪ್ರತಿನಿತ್ಯ ಅಭ್ಯರ್ಥಿಗಳು ತಮ್ಮ ತಮ್ಮ ಫಾರ್ಮ್‍ಹೌಸ್‍ಗಳಲ್ಲಿ ಗುಂಡು ಹಾಗೂ ತುಂಡುಗಳ ಪಾರ್ಟಿಗಳನ್ನು ಜೋರಾಗಿ ನಡೆಸುತ್ತಿದ್ದಾರೆ.

ಈ ನಡುವೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮದ್ಯದ ಅಭಾವ ಎದುರಾಗುವ ಸಾಧ್ಯತೆಗಳಿದ್ದು, ಹೀಗಾಗಿ ಜನರು ಮುಂಚಿತವಾಗಿಯೇ ಮದ್ಯ ಖರೀದಿ ಮಾಡಲು ಆರಂಭಿಸಿದ್ದು, ಕಳೆದ 15 ದಿನಗಳಿಂದ ಮದ್ಯ ಮಾರಾಟ ಶೇ.125ರಷ್ಟು ಏರಿಕೆಯಾಗಿದೆ ಎಂದು ಅಧಇಕಾರಿಗಳು ಮಾಹಿತಿ ನೀಡಿದ್ದಾರೆ.

ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 1 ರಿಂದ 14 ರ ಅವಧಿಯ ಚುನಾವಣೆ ಘೋಷಣೆಯ ನಂತರ ಜಿಲ್ಲೆಯಲ್ಲಿ 67,542 ಮದ್ಯ ಮತ್ತು 21,560 ಬಿಯರ್ ಪೆಟ್ಟಿಗೆಗಳು ಮಾರಾಟವಾಗಿವೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 54,106 ಬಾಕ್ಸ್ ಮದ್ಯ ಮತ್ತು 18,363 ಬಿಯರ್ ಪೆಟ್ಟಿಗೆಗಳು ಮಾರಾಟವಾಗಿದ್ದವು. ಇದಲ್ಲದೆ, ಮಹಾರಾಷ್ಟ್ರ ಮತ್ತು ಗೋವಾ ಗಡಿಗಳಿಗೆ ಸಮೀಪವಿರುವ ಹಳ್ಳಿಗಳಲ್ಲಿ ಕೆಲವು ಅಭ್ಯರ್ಥಿಗಳು ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಮದ್ಯಕ್ಕಿಂತಲೂ ಗೋವಾದ ಮದ್ಯ ಅಗ್ಗ ದರವಾಗಿರುವುದಿಂದ ಅಲ್ಲಿಂದ ಮದ್ಯವನ್ನು ಅಕ್ರಮವಾಗಿ ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ವೀರಶೈವ-ಲಿಂಗಾಯತ ಒಬಿಸಿ ಸೇರ್ಪಡೆಗೆ ಒತ್ತಾಯ

Spread the love ಬೆಂಗಳೂರು: ಜಾತಿ ಗಣತಿ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ) ವರದಿಯನ್ನು ಮುಂದಿನ ಸಚಿವ ಸಂಪುಟದಲ್ಲಿ ಕೈಗೆತ್ತಿಕೊಳ್ಳಲು ಸರಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ