ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಬ್ಬೂರ ಪಟ್ಟಣದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ವಿವಿಧ ಫಲಾನುಭವಿಗಳಿಗೆ ಯೋಜನೆಗಳನ್ನು ವಿತರಿಸಿದರು.
ಈ ವೇಳೆ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ,ಮುಖಂಡರಾದ ಶ್ರೀ ಮಹಾವೀರ ಮೊಹಿತೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಕಾಮಗಾರಿಗಳ ವಿವರಗಳು.
1. ಸನ್ 2024-25ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಡಿ, ಕಬ್ಬೂರ ಪಟ್ಟಣ ಪಂಚಾಯತಿಯ ಕಛೇರಿ ನಿರ್ಮಾಣ. ವೆಚ್ಚ: 22.50 ಲಕ್ಷ.
2. ಸನ್ 2022-23ನೇ ಸಾಲಿನ 15ನೇ ಹಣಕಾಸು ಉಳಿತಾಯವಾದ ಅನುದಾನದಡಿ ಕಬ್ಬೂರ ಪಟ್ಟಣ ಪಂಚಾಯತ ವ್ಯಾಪ್ತಿಯ ಬಾಗೇವಾಡಿ ರಸ್ತೆಗೆ ಬಸ್ ತಂಗುದಾನ ನಿರ್ಮಾಣ. ವೆಚ್ಚ: 6.00 ಲಕ್ಷ.
3. ಸನ್ 2024-25ನೇ ಸಾಲಿನ ಎಸ್.ಎಫ್.ಸಿ ಶೇ 5% ಅನುದಾನದಡಿ ವಿಕಲಚೇತನರಿಗೆ ತ್ರಿಚಕ್ರ ವಾಹನ ಪೂರೈಕೆ. ವೆಚ್ಚ: 6.90 ಲಕ್ಷ.
4. ಸನ್ 2024-25ನೇ ಸಾಲಿನ ಎಸ್.ಎಫ್.ಸಿ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಶೇ 24.10 % & ಶೇ 7.25% ಇತರೆ ಜನಾಂಗದ ಅನುದಾನದಡಿ ಹೋಲಿಗೆ ಯಂತ್ರಗಳ ಪೂರೈಕೆ. ವೆಚ್ಚ: 4.96 ಲಕ್ಷ.