ಕಾರ್ಮಿಕ ದಿನಾಚರಣೆ: ಕಾರ್ಮಿಕರಿಗೆ ಅತ್ಯುತ್ತಮ ಸೇವಾ ಪ್ರಶಸ್ತಿ ನೀಡಿ ಗೌರವ ಸಲ್ಲಿಕೆ
ಬೆಳಗಾವಿ: ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ವತಿಯಿಂದ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಜಿಲ್ಲಾಸ್ಪತ್ರೆಯ ಕಾರ್ಮಿಕರಿಗೆ ಸ್ನೇಹ ಕೂಟ ಹಾಗೂ ಅತ್ಯುತ್ತಮ ಸೇವಾ ಪ್ರಶಸ್ತಿ ನೀಡಲು ಸತ್ಕಾರ ಸಮಾರಂಭ ಆಯೋಜಿಸಲಾಗಿತ್ತು.

ಬೆಳಗಾವಿ ನಗರದ ಬಿಮ್ಸ್ ಆವರಣದಲ್ಲಿ ಇರುವ ಸಭಾ ಭವನದಲ್ಲಿ ಈ ಭವ್ಯವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, ಕಾರ್ಮಿಕರು ಇದ್ದಾರೆ ಎಂದು ನಮ್ಮ ಎಲ್ಲರ ಆರೋಗ್ಯ ಚೆನ್ನಾಗಿ ಇದೆ. ಎಲ್ಲಾ ವಿಭಾಗದ ಕಾರ್ಮಿಕರಿಂದ ದೇಶದ ಉನ್ನತಿ ಆಗುತ್ತಿದೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಎಲ್ಲ ಬಡವರು ಹಾಗೂ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದೆ.
ಬೆಳಗಾವಿ ಪಾಲಿಕೆ ವ್ಯಾಪ್ತಿಯ ಸುಮಾರು 400 ಕಾರ್ಮಿಕರನ್ನು ಖಾಯಂ ಮಾಡಿದ್ದೇವೆ. ಗುತ್ತಿಗೆದಾರ ಬಂಗಾರೆಯವರು ಉತ್ತಮ ಕೇಸಲ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಎಲ್ಲಾ ಕಾರ್ಮಿಕರಿಗೆ ಲಾಭ ಮಾಡಿಕೊಡುತ್ತಿದ್ದಾರೆ. 16 ಸಾವಿರ ಇದ್ದ ಕಾರ್ಮಿಕರ ಕನಿಷ್ಟ ವೇತನವನ್ನು 25 ಸಾವಿರಕ್ಕೆ ಏರಿಸಿದ್ದಾರೆ ಎಂದರು.
ಇದೆ ವೇಳೆ ಆಸ್ಪತ್ರೆಯಲ್ಲಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಅತ್ಯುತಮ ಸೇವಾ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಗುತ್ತಿಗೆದಾರ ಬಾವರಾಜ ಬಂಗಾರಿ, ಬೆಳಗಾವಿ ನಗರ ಕಾರ್ಮಿಕ ಘಟಕದ ಕಾರ್ಯಧ್ಯಕ್ಷೆ ಭಾರತಿ ಡವಳೆ, ಕಸ್ತೂರಿ ಕೊಲ್ಕಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Laxmi News 24×7