ಬೀದರ್ : ಸರ್ಕಾರ ಬಡಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಔಷದಿ ನೀಡುವ ಕೆಲಸ ಮಾಡಬೇಕಾಗಿದ್ದು. ಆ ನಿಟ್ಟಿನಲ್ಲಿ ಜನೌಷಧಿ ಕೇಂದ್ರಗಳು ಬಹುಮುಖ್ಯವಾಗಲಿವೆ ಎಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನ್ನಾಎಖೇಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಬಳಿ ನೂತನವಾಗಿ ನಿರ್ಮಾಣವಾದ ‘ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಆರೋಗ್ಯ ಕ್ಷೇತ್ರದ ಸುಧಾರಣೆ ನಿಟ್ಟಿನಲ್ಲಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ.
ಜಿಲ್ಲಾಸ್ಪತ್ರೆಯಲ್ಲಿ ಇರುವಂತ ಸೌಲಭ್ಯಗಳನ್ನ ಒಳಗೊಂಡ ಕಣ್ಣೀನ ಆಸ್ಪತ್ರೆಯನ್ನು ಮನ್ನಾಎಖೇಳ್ಳಿಗೆ ತರುವ ಪ್ರಯತ್ನದಲ್ಲಿದ್ದೇನೆ. ನನ್ನ ಮತಕ್ಷೇತ್ರದ ಬಗದಲ್, ಕಮಠಾಣಾ, ಮನ್ನಳ್ಳಿ, ನಿರ್ಣಾ ಸೇರಿ ಐದು ಆಸ್ಪತ್ರೆಗಳಿಗೆ ಐದು ವಿಶೇಷ ಆಂಬುಲೆನ್ಸ್ ಗಳನ್ನು ನನ್ನ ಅನುಧಾನದಲ್ಲಿ ಕೊಡಿಸುವ ಯೋಜನೆ ರೂಪಿಸಿದ್ದೇನೆ. ಬೀದರ್ ಜಿಲ್ಲೆಯ ಒಂದು ಪೇಸೆಂಟ್ ಕೂಡ ಹೊರ ರಾಜ್ಯಕ್ಕೆ ಹೋಗದಂತೆ ಎಲ್ಲಾ ರೀತಿಯ ಚಿಕಿತ್ಸೆ ಬೀದರ್ ನಲ್ಲಿ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ.
ಆರೋಗ್ಯ ಕ್ಷೇತ್ರಕ್ಕೆ ಬೇಕಾಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಬೀದರ್ ಜಿಲ್ಲೆಗೆ ತರಲು ನಾನು ಸಚಿವನಾಗಿದ್ದಾಗಲೇ ಪ್ರಯತ್ನಿಸಿದ್ದೆ. ಈಗಲೂ ಆ ಕೆಲಸ ಮಾಡುತ್ತಿದ್ದೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.