Breaking News

ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಸ್ಪಂದಿಸಿ, ಉಪಸಮಿತಿ ರಚಿಸಿನನ್ನ ಅಧ್ಯಕ್ಷರನ್ನಾಗಿ ನೇಮಿಸಿದೆ’ :ಶ್ರೀರಾಮುಲು

Spread the love

ಬೆಂಗಳೂರು : ‘ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಸ್ಪಂದಿಸಿ, ಉಪಸಮಿತಿ ರಚಿಸಿದೆ. ಅದಕ್ಕೆ ನನ್ನ ಅಧ್ಯಕ್ಷರನ್ನಾಗಿ ನೇಮಿಸಿದೆ’ ಅಂತಾ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಇಲ್ಲಿನ ಕುಮಾರ ಕೃಪೆ ಗೃಹದಲ್ಲಿ ನಡೆದ ಮೂರನೇ ವಷ೯ದ ಶ್ರೀಮಹಷಿ೯ ವಾಲ್ಮೀಕಿ ಜಾತ್ರೆಯ ಪೂವ೯ಭಾವಿ ಸಭೆಯಲ್ಲಿ ಮಾತನಾಡಿದರು.

‘ವಾಲ್ಮೀಕಿ ಜನಾಂಗದವರು ಮೀಸಲಾತಿ ಹೆಚ್ಚಳದ ಬಗ್ಗೆ ಆತಂಕಕ್ಕೆ ಒಳಗಾಗಬಾರದು. ಸಮುದಾಯದ ಬೇಡಿಕೆಗೆ ನಾವೆಲ್ಲರೂ ಒಟ್ಟಾಗಿ ಶುಭ ಸುದ್ದಿಯನ್ನು ತಿಳಿಸುತ್ತೇವೆ. ಈಗಾಗಲೇ ಈ ವಿಚಾರದಲ್ಲಿ ನಾವು ಆಯೋಗದ ವರದಿಯನ್ನು ಜಾರಿಗೆ ತರಲು ಕ್ರಮ  ಕೈಗೊಂಡಿದ್ದೇವೆ’ ಎಂದಿದ್ದಾರೆ.

‘ಮೀಸಲಾತಿಯ ಬಗ್ಗೆ  ಹೇಳುವ ಸಮಯದ ಇದು ಅಲ್ಲ. ನಾವೆಲ್ಲರೂ ಸಾಂಘಿಕವಾಗಿ ಒಗ್ಗಟ್ಟಿನಿಂದ 3ನೇ ವರ್ಷದ ಜಾತ್ರೆಯಲ್ಲಿ ನಮ್ಮ ಕುಲಗುರು ವಾಲ್ಮೀಕಿ ಅಜ್ಜನ ರಥವನ್ನು ಎಳೆಯುವುದರ ಜೊತೆಗೆ ನಮ್ಮ ಸಮುದಾಯದ ಬಹುದಿನಗಳ ಬೇಡಿಕೆಯ ರಥವನ್ನು ಎಳೆಯುವ ಕೆಲಸವನ್ನು ನಾವೆಲ್ಲರೂ ಜೊತೆಗೂಡಿ ಮಾಡುತ್ತೇವೆ’ ಎಂದು ಸೂಕ್ಷ್ಮವಾಗಿ ತಿಳಿಸಿದರು.


Spread the love

About Laxminews 24x7

Check Also

ಗೌರಿ ಹುಣ್ಣಿಮೆಯಿಂದ ಛಟ್ಟಿ ಅಮವಾಸ್ಯೆವರೆಗೆ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್​ ವ್ಯವಸ್ಥೆ

Spread the love ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನ ತೆರಳುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ