Breaking News

ಒಂದೇ ತಿಂಗಳಲ್ಲಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಎರಡು ಬಾರಿ ರೌಡಿಗಳ ಪರಿಶೀಲನೆ ನಡೆಸಿದ್ದಾರೆ.

Spread the love

ಬೆಳಗಾವಿ: ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವವರನ್ನು ಪೊಲೀಸರು ರೌಡಿಶೀಟರ್ ಪಟ್ಟಿಗೆ ಸೇರಿಸಿರುತ್ತಾರೆ. ಅದಾದ ಬಳಿಕ‌ವೂ ಯಾವುದಾದ್ರೂ ಪ್ರಕರಣಗಳಲ್ಲಿ ಅವರ ಪಾತ್ರ ಕಂಡು ಬಂದರೆ ರೌಡಿಶೀಟರ್ ಹಣೆ ಪಟ್ಟಿಯಲ್ಲೇ ಮುಂದುವರಿಯುತ್ತಾರೆ. ಇನ್ನು 10 ವರ್ಷಗಳಲ್ಲಿ ಯಾವುದೇ ಕೃತ್ಯದಲ್ಲಿ ಭಾಗಿಯಾಗದಿದ್ದರೆ ಅಂತಹವರನ್ನು ಆ ಪಟ್ಟಿಯಿಂದ ತೆಗೆಯಲಾಗುತ್ತದೆ. ಹಾಗಾದರೆ ಬೆಳಗಾವಿ ನಗರದಲ್ಲಿ ಎಷ್ಟು ಜನರ ಮೇಲೆ ರೌಡಿಶೀಟರ್​ ಕೇಸ್ ದಾಖಲಾಗಿದೆ? ರೌಡಿಗಳಿಗೆ ಪೊಲೀಸ್ ಕಮಿಷನರ್ ಹೇಳೋದೇನು? ಇಲ್ಲಿದೆ ಈಟಿವಿ ಭಾರತ ವಿಶೇಷ ವರದಿ.

ಹೌದು, ಬೆಳಗಾವಿ ಅತ್ಯಂತ ಸೂಕ್ಷ್ಮ ನಗರ. ಭಾಷೆ, ಗಡಿ ವಿಚಾರದಲ್ಲಿ ಸದಾಕಾಲ ಒಂದಿಲ್ಲೊಂದು ಗಲಾಟೆಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಭಾಷಾ ವೈಷಮ್ಯ, ಕೋಮುಗಲಭೆ, ಗುಂಪು ಘರ್ಷಣೆ, ವೈಯಕ್ತಿಕ ಕಾರಣಕ್ಕೆ ಹೊಡೆದಾಟ-ಚಾಕು ಇರಿತ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಇಂಥ ಪ್ರಕರಣಗಳಲ್ಲಿ ಭಾಗಿಯಾಗುವ ಕಿಡಿಗೇಡಿಗಳ ಮೇಲೆ ರೌಡಿಶೀಟರ್ ಕೇಸ್ ದಾಖಲಿಸಿ ಪೊಲೀಸರು ಬಿಸಿ ಮುಟ್ಟಿಸುತ್ತಾರೆ.

ಬೆಳಗಾವಿ ನಗರದಲ್ಲಿ ಸದ್ಯ ಒಟ್ಟು 1062 ರೌಡಿಶೀಟರ್​ಗಳಿದ್ದಾರೆ. ಮನಃ ಪರಿವರ್ತನೆಯಾಗಿ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೇ ಬದಲಾಗುವವರು ಅನೇಕರು. ಆದರೆ, ಒಮ್ಮೆ ರಕ್ತದ ಕಲೆ ಮೈಗೆ ಅಂಟಿಸಿಕೊಂಡವರು ಅದರಿಂದ ಹೊರ ಬಾರದೇ ಇರುವವರು‌ ಹಲವರು. 2023ರಲ್ಲಿ 177, 2024ರಲ್ಲಿ 129 ಜನರನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆಯಲಾಗಿದೆ. 2025ನೇ ಸಾಲಿನಲ್ಲಿ 4 ಜನರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅವರನ್ನೂ ಪಟ್ಟಿಯಿಂದ ತೆಗೆಯಲಾಗಿದೆ. ಈಗ ಮತ್ತೆ 23 ಜನರನ್ನು ರೌಡಿ‌ಶೀಟರ್ ಕೇಸ್​ನಿಂದ ಮುಕ್ತಗೊಳಿಸಲು ಪೊಲೀಸ್ ಕಮಿಷನರ್ ಸೂಚಿಸಿದ್ದಾರೆ.

ಮಾರ್ಚ್ ಒಂದೇ ತಿಂಗಳಲ್ಲಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಎರಡು ಬಾರಿ ರೌಡಿಗಳ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಮಹಾಜನ ವರದಿಯೇ ಅಂತಿಮ ಎಂದು ನಿರ್ಣಯ ಕೈಗೊಳ್ಳಲು ಕನ್ನಡಪರ ಸಂಘಟನೆಗಳ ಒತ್ತಾಯ

Spread the loveಬೆಳಗಾವಿ: ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ. ಮಹಾಜನ ವರದಿಯೇ ಅಂತಿಮ ಎಂದು ಐತಿಹಾಸಿಕ ನಿರ್ಣಯ ಕೈಗೊಳ್ಳಲು ಬೆಳಗಾವಿ ಮಹಾನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ