Breaking News

ಶಾಸಕ ಯತ್ನಾಳ ಉಚ್ಚಾಟನೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ:ಹಲವೆಡೆ ಪ್ರತಿಭಟನೆಗಳು, ಯತ್ನಾಳ ಅಭಿಮಾನಿಗಳಿಂದ ರಾಜೀನಾಮೆ

Spread the love

ಶಾಸಕ ಯತ್ನಾಳ ಉಚ್ಚಾಟನೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಭುಗಿಲೆದ್ದ ಆಕ್ರೋಶ:ಹಲವೆಡೆ ಪ್ರತಿಭಟನೆಗಳು, ಯತ್ನಾಳ ಅಭಿಮಾನಿಗಳಿಂದ ರಾಜೀನಾಮೆ
ವಿಜಯಪುರ ನಗರ‌ ಶಾಸಕ ಬಸನಗೌಡ ‌ಪಾಟೀಲ ಯತ್ನಾಳಗೆ ಬಿಜೆಪಿಯಿಂದ ಉಚ್ಚಾಟನೆ ಬೆನ್ನಲ್ಲೇ ಜಿಲ್ಲೆಯಲ್ಲಿ ಯತ್ನಾಳ ಬೆಂಬಲಿಗರ ರಾಜೀನಾಮೆ ಪರ್ವ ಮುಂದುವರೆದರೆ, ಜಿಲ್ಲೆಯ ಕೆಲ ಭಾಗದಲ್ಲಿ ಪ್ರತಿಭಟನೆ ಕೂಡಾ ನಡೆಯುತ್ತಿವೆ. ಇತ್ತ ಜಿಲ್ಲಾ ಕೋರ್ ಕಮಿಟಿಯಲ್ಲಿ ಸಹಿತ ಯತ್ನಾಳ ‌ ಉಚ್ಚಾಟನೆ ಅಂಗೀಕಾರ ಮಾಡಿದ್ಧಾರೆ. ಈ ಕುರಿತಾದ ‌ಒಂದು ಕಂಪ್ಲೀಟ್ ವರದಿ‌ ಇಲ್ಲಿದೆ ನೋಡಿ…
ಹೌದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ ಹಿನ್ನಲೆ ವಿಜಯಪುರ ಜಿಲ್ಲೆಯಲ್ಲಿ ‌ಯತ್ನಾಳ ಅಭಿಮಾನಿಗಳು ಭುಗಿಲೆದ್ದಿದ್ದಾರೆ. ಯತ್ನಾಳ್ ಉಚ್ಚಾಟನೆ ‌ವಿರೋಧಿಸಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಶಾಸಕ ಯತ್ನಾಳ ಅಭಿಮಾನಿಗಳು ವಿಜಯೇಂದ್ರ, ಯಡಿಯೂರಪ್ಪ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ರಸ್ತೆ ಮೇಲೆ ಭಾವಚಿತ್ರಗಳನ್ನ ಇಟ್ಟು ತುಳಿದು ಆಕ್ರೋಶ ಹೊರ ಹಾಕಿದರು. ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಯತ್ನಾಳ್ ಬೆಂಬಲಿಗರು ಹಾಗೂ ಪಂಚಮಸಾಲಿ ಸಮಾಜದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ವಿಜಯಪುರ ನಗರದ ಶಾಸಕ ಯತ್ನಾಳ ಅವರ ಕಚೇರಿ ಮುಭಾಗ ಯತ್ನಾಳ ಅವರ ಉಚ್ಚಾಟನೆ ಹಿನ್ನಲೆಯಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಹೊರ ಬರಲು ಅಭಿಮಾನಿಗಳು ಅಭಿಯಾನ ಶುರು ಮಾಡಿದ್ದಾರೆ. ನಮೋ ಆಫ್ ಮೂಲಕ ಪ್ರಾಥಮಿಕ ಸದಸ್ಯತ್ವದಿಂದ ಹೊರ ಬರಲು ಅಭಿಯಾನವನ್ನೆ ಮಾಡುತ್ತಿದ್ದಾರೆ. ವಿಜಯಪುರ ನಗರದ ಶಾಸಕ ಯತ್ನಾಳ ಅವರ ಕಚೇರಿ ಮುಂಭಾಗ ತಮ್ಮ ತಮ್ಮ ಪ್ರಾಥಮಿಕ ಸದಸ್ಯತ್ವ ರದ್ದು ಮಾಡಿಕೊಂಡರು.
ಈಗಾಗಲೇ ಜಿಲ್ಲೆಯಲ್ಲಿ ನೂರಾರು ಸದಸ್ಯರಿಂದ ಈಗಾಗಲೇ ಪ್ರಾಥಮಿಕ ಸದಸ್ಯತ್ವ ರದ್ದು ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಕೈಯ್ಯಲ್ಲಿ ರಾಜೀನಾಮೆ ಪತ್ರ ಹಿಡಿದು ಬಿಜೆಪಿ ಕಚೇರಿ ಬಂದು ಮೋರ್ಚಾ, ನಗರ ಮಂಡಲ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸ್ಥಾನಗಳಿಗೆ ರಾಜೀನಾಮೆ ಪತ್ರಗಳನ್ನ ಜಿಲ್ಲಾಧ್ಯಕ್ಷರಿಗೆ ನೀಡಿದರು. ಜಿಲ್ಲಾಧ್ಯಕ್ಷರು ಮನವಲಿಕೆ ಯತ್ನ ಮಾಡಿದರು,
ರಾಜೀನಾಮೆ ಪಡೆಯಿರಿ ಎಂದು ಪದಾಧಿಕಾರಿಗಳ ಒತ್ತಾಯ ಪೂರ್ವಕವಾಗಿ ರಾಜೀನಾಮೆ ನೀಡಿದರು. ಇದೇ ವೇಳೆ ಮಹಿಳಾ ಪದಾಧಿಕಾರಿ ಲಕ್ಷ್ಮಿ ಕನ್ನೋಳ್ಳಿ ಕಣ್ಣೀರು ಹಾಕಿದರು. ಇದರ ಮದ್ಯೆ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರ ನೇತೃತ್ವದಲ್ಲಿ ಮಾದ್ಯಮಗೋಷ್ಠಿ ನಡೆಸಿ ಯತ್ನಾಳ್ ಉಚ್ಚಾಟನೆಯನ್ನು ಜಿಲ್ಲಾ ಬಿಜೆಪಿ ಕೋರ್ ಕಮೀಟಿಯಲ್ಲಿ ಸರ್ವಾನುಮತದಿಂದ ಅಂಗಿಕರಿಸಲಾಗಿದೆ ಎಂದು ಮಾಜಿ ಎಂ ಎಲ್ ಸಿ ಅರುಣ ಶಹಾಪುರ ಹೇಳಿದರು
ಇನ್ನೊಂದೆಡೆ ಪಂಚಮಸಾಲಿ ಸಮಾಜದ ಮುಖಂಡರು ಯತ್ನಾಳ ಅಭಿಮಾನಿಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಸಿದ್ದೇಶ್ವರ ದೇಗುಲದಿಂದ ಗಾಂಧಿಚೌಕ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರ‌್ಯಾಲಿಯಲ್ಲಿ ವಿಜಯೇಂದ್ರ ಹಾಗೂ ಯಡಿಯೂರಪ್ಪನವರ ಅಣುಕು ಶವಯಾತ್ರೆ ಮಾಡಿ ವಿಜಯಪುರ ನಗರದ ಗಾಂಧಿ ವೃತ್ತದಲ್ಲಿ ಎರಡು ಚಿತೆಗಳನ್ನ ಮಾಡಿ ಯಡಿಯೂರಪ್ಪ, ವಿಜಯೇಂದ್ರ ಪ್ರತಿಕೃತಿಗೆ ಬೆಂಕಿ ಹಚ್ಚಿದರು.
ಇದೇ ಸಂದರ್ಭದಲ್ಲಿ ಬೆಂಕಿ‌ ನಂದಿಸಲು ಬಂದ ಅಗ್ನಿ ಶಾಮಕ ವಾಹನಕ್ಕೆ ಬೆಂಕಿ ನಂದಿಸದಂತೆ ಅಗ್ನಿಶಾಮಕ ವಾಹನಕ್ಕೆ ಅಡ್ಡ ನಿಂತ ಲಕ್ಷ್ಮೀ ಎನ್ನುವ ಮಹಿಳೆ ಅಗ್ನಿ ಶಾಮಕ ವಾಹನಕ್ಕೆ ಬೆಂಕಿ ನಂದಿಸದಂತೆ ತಡೆದಳು.
ಇದೇ ವೇಳೆ ಪೊಲೀಸರ ಜೊತೆಗೆ ಮಹಿಳೆ ವಾಗ್ವಾದ ನಡೆಸಿದಳು. ಇನ್ನೂ ನಗರದ ಗಾಂಧಿ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ವೇಳೆ ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ವಾಗ್ದಾಳಿ ನಡೆಸಿದರು. ಶಾಸಕ ಯತ್ನಾಳ ಅವರ ಉಚ್ಚಾಟನೆ ಆದ ಸಂದರ್ಭದಲ್ಲಿ ಕೆಲ ನಕಲಿ ಹಿಂದುತ್ವವಾದಿಗಳು ಬಿಜೆಪಿ ಮುಖಂಡರು ಸಂಭ್ರಮಾಚರಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು…

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ