ಟಾಲಿವುಡ್‍ನಲ್ಲಿ ಆದಿಪುರುಷ್‍ನಲ್ಲಿ ರೆಬೆಲ್‍ಸ್ಟಾರ್ ಪ್ರಭಾಸ್ ರಾಮನ ಅವತಾರದಲ್ಲಿ ಕಾಣಿಸಿಕೊಂಡಿರುವ ಬೆನ್ನಲ್ಲೇ ಸ್ಯಾಂಡಲ್‍ವುಡ್‍ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ರಾಮನ ಅವತಾರ ಎತ್ತಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ದರ್ಶನ್ ಹನುಮಂತನಾಗಿ ಕಾಣಿಸಿಕೊಳ್ಳುವ ಅಚ್ಚರಿ ಮೂಡಿಸಿದ್ದರು, ಆದರೆ ಈಗ ಹನುಮಂತನ ಪಾತ್ರಧಾರಿಯಾಗಿ ಕಿಚ್ಚ ಸುದೀಪ್ ಅವತಾರ ಎತ್ತಿದ್ದಾರೆ.
ಅರೆ… ಹಾವು, ಮುಂಗುಸಿಯಂತೆ ಆಡುತ್ತಿರುವ ದರ್ಶನ್ ಹಾಗೂ ಸುದೀಪ್ ಅವರು ಒಂದಾದರೆ ಎಂದು ಸಂತೋಷ ಪಡಬೇಡಿ, ಈ ರೀತಿ ದಚ್ಚು- ಕಿಚ್ಚ ಒಂದಾಗಿರುವುದು ಖ್ಯಾತ ವರ್ಣಮಯ ಚಿತ್ರಕಾರನಾದ ಕರಣ್ ಆಚಾರ್ಯರ ಕಲ್ಪನೆಯಲ್ಲಿ. ದಚ್ಚು ಹಾಗೂ ಕಿಚ್ಚನ ಪರಮ ಅಭಿಮಾನಿಯಾಗಿರುವ ಮಂಜು ಎಂಬುವವರ ಮನವಿ ಮೇರೆಗೆ ಕರಣ್ ಆಚಾರ್ಯ ಅವರು ತಮ್ಮ ಕುಂಚದ ಕಲ್ಪನೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್‍ರನ್ನು ಶ್ರೀರಾಮನಾಗಿಯೂ, ಕಿಚ್ಚ ಸುದೀಪ್‍ರನ್ನು ರಾಮನ ಭಂಟ ಹನುಮಂತನಾಗಿಯೂ ಸೃಷ್ಟಿಸಿದ್ದಾರೆ.ಒಂದು ಕಾಲದ ಕುಚುಕು ಗೆಳೆಯರಾಗಿದ್ದ ದಚ್ಚು ಹಾಗೂ ಕಿಚ್ಚ ಅವರು ಶ್ರೀರಾಮ ಮತ್ತು ಹನುಮಂತನಂತೆ ಪರಮಮಾಪ್ತ ಗೆಳೆಯರಾಗಿ ಬಾಳಲಿ ಎಂಬ ಕುಂಚದ ಆಶಯವು ನಿಜವಾಗಲಿ ಎಂಬುದು ದರ್ಶನ್ ಹಾಗೂ ಸುದೀಪ್‍ರ ಅಭಿಮಾನಿಗಳ ಹೆಬ್ಬಯಕೆಯಾಗಿದೆ.
Laxmi News 24×7