15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದೆ ಕರ್ನಾಟಕದ ತಂಡ…
ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಬೆಳಗಾವಿಯ ದೇಹದಾರ್ಢ್ಯಪಟುಗಳು…
ಇದೇ ತಿಂಗಳು ನಡೆಯಲಿರುವ 15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆ 2025ರಲ್ಲಿ ಕರ್ನಾಟಕದ ತಂಡವು ಭಾಗವಹಿಸಲಿದ್ದು, ಈ ತಂಡಕ್ಕೆ ಬೆಳಗಾವಿ ಸೇರಿದಂತೆ ವಿವಿಧೆಡೆ ದೇಹದಾರ್ಢ್ಯಪಟುಗಳು ಆಯ್ಕೆಯಾಗಿದ್ದಾರೆ.
ಇದೇ ತಿಂಗಳ 29 ಮತ್ತು 30 ರಂದು ಛತ್ತೀಸಗಢದ ಬಿಲಾಸಪುರದಲ್ಲಿ ನಡೆಯಲಿರುವ 15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆ 2025ರಲ್ಲಿ ಕರ್ನಾಟಕ ತಂಡವು ಭಾಗವಹಿಸಲಿದೆ.
ಈ ತಂಡಕ್ಕೆ ಬೆಳಗಾವಿಯ ಶ್ರೀಶಿವ ಮೋದಗೇಕರ, ಶ್ರವಣ ಲಾಡ್. ವೀನಿತ್ ಹಣಮಶೇಟ್, ಶಿವನಗೌಡ ಖೇತಗೌಡರ, ಪ್ರತಾಪ ಕಾಲಕುಂದ್ರಿಕರ, ರಾಜಕುಮಾರ್ ಬೋಕಡೆ ಸೇರಿದಂತೆ
ಜೀತೂ ಕಾಯಿ, ಅವಿನಾಶ ಪರೀಟ್, ಎನ್ ಭರತ್, ಚಿರಾಗ್ ಆರ್. ರಾಘವೇಂದ್ರ ನಾಯ್ಕ್, ಹೇಮಂತ್ ಕುಮಾರ್, ಸರವಣನ್.ಎಚ್., ಸಾಹೇಬ್’ಲಾಲ್ ಛಪ್ಪರಬಂದ್, ಸದಾನಂದ ಲಕ್ಷ್ಮಣ ಬಿ ಮತ್ತು ಮೊಹ್ಮದ್’ಹುಸೇನ್ ಜಮಾದಾರ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆಂದು ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ತಿಳಿಸಿದೆ.
Laxmi News 24×7