Breaking News

ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಕೆಲವು ಮಾರ್ಗಗಳ ಬಸ್​ ಅಂಕಣಗಳನ್ನು ಮರು ಹೊಂದಾಣಿಕೆ ಮಾಡಲಾಗಿದೆ‌.

Spread the love

ಹುಬ್ಬಳ್ಳಿ: ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಡುತ್ತಿದ್ದ ಉಪನಗರ ಸಾರಿಗೆ ಬಸ್​​ಗಳನ್ನು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿಯ ನೂತನ ನಗರ-ಉಪನಗರ ಸಾರಿಗೆ ಬಸ್ ನಿಲ್ದಾಣಕ್ಕೆ (ಹಳೇ ಬಸ್​ ನಿಲ್ದಾಣ) ಸ್ಥಳಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸೂರು ನಿಲ್ದಾಣದಲ್ಲಿನ ಲಭ್ಯ ಸ್ಥಳವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿಂದ ಹೊರಡುವ ಕೆಲ ಮಾರ್ಗಗಳ ಬಸ್​​ಗಳ ಅಂಕಣಗಳನ್ನು ಮರು ಹೊಂದಾಣಿಕೆ ಮಾಡಲಾಗಿದೆ‌ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಹೊಸೂರು ಬಸ್ ನಿಲ್ದಾಣದ ಅಂಕಣ ಸಂಖ್ಯೆ 5 ಮತ್ತು 6ರಲ್ಲಿ ನಿಲುಗಡೆಯಾಗುತ್ತಿದ್ದ ಕಲಘಟಗಿ, ಗಂಜೀಗಟ್ಟಿ, ಬಗಡಗೇರಿ, ಹುಲಕೊಪ್ಪ- ಅಂಚಟಗೇರಿ ಮಾರ್ಗಗಳ ಬಸ್​​ಗಳನ್ನು ನಿಲ್ದಾಣದ ಮೇಲುಗಡೆಗೆ, ಹಿಂದಿನ ತಾರಿಹಾಳ ಮಾರ್ಗದ ಉಪನಗರ ಸಾರಿಗೆ ಅಂಕಣ ಸಂಖ್ಯೆ 14ಕ್ಕೆ ಸ್ಥಳಾಂತರಿಸಲಾಗಿದೆ.

ಅಂಕಣ ಸಂಖ್ಯೆ 9 ಮತ್ತು 10 ರಿಂದ ಹೊರಡುತ್ತಿದ್ದ ಹೆಬ್ಬಳ್ಳಿ, ಶಿರಕೋಳ ಮಾರ್ಗದ ಬಸ್​​ಗಳನ್ನು ಮೆಲುಗಡೆ ಅಂಕಣ ಸಂಖ್ಯೆ 13ಕ್ಕೆ ಸ್ಥಳಾಂತರ ಮಾಡಲಾಗಿದೆ.

ಅಂಕಣ ಸಂಖ್ಯೆ 9 ಮತ್ತು 10ರಿಂದ ಹೊರಡುತ್ತಿದ್ದ ಶಿರಹಟ್ಟಿ, ಇಂಗಳಳ್ಳಿ, ನಲವಡಿ, ಕೊಂಕಣಕುರಹಟ್ಟಿ, ಗದಗ ಮಾರ್ಗಗಳ ಸಾಮಾನ್ಯ ಸಾರಿಗೆಗಳ ಬಸ್​​ಗಳನ್ನು ಅಂಕಣ ಸಂಖ್ಯೆ 5 ಮತ್ತು 6ಕ್ಕೆ ಸ್ಥಳಾಂತರಿಸಲಾಗಿದೆ. ಅಂಕಣ ಸಂಖ್ಯೆ 9ಮತ್ತು 10ನ್ನು ಪ್ರಯಾಣಿಕರು ಇಳಿಯುವ ಸ್ಥಳವನ್ನಾಗಿ (Alighting Point) ಬದಲಾಯಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕ ಹವಾಮಾನ ವರದಿ: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆಯ ಸೂಚನೆ

Spread the loveಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ ಆವರಿಸಿದ್ದು, ಇನ್ನು ಕೆಲ ದಿನಗಳಲ್ಲಿ ಬೆಂಗಳೂರು ಬಿಸಿಲಿನ ಬೇಗೆಯಿಂದ ತತ್ತರಿಸಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ