Breaking News

ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದ ಬಳಿಕ ಪತ್ನಿಯ ತಲೆ ಹಾಗೂ ಮುಖಕ್ಕೆ ಗುದ್ದಲಿಯಿಂದ ಹೊಡೆದು ಬರ್ಬರವಾಗಿ ಕೊಲೆ

Spread the love

ಬಾಗಲಕೋಟೆ: ವ್ಯಕ್ತಿಯೊಬ್ಬ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದ ಬಳಿಕ ಪತ್ನಿಯ ತಲೆ ಹಾಗೂ ಮುಖಕ್ಕೆ ಗುದ್ದಲಿಯಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಸುಮಿತ್ರಾ ಉಳ್ಳಾಗಡ್ಡಿ(48) ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಲೆಗೈದ ಬಳಿಕ ಆರೋಪಿ ಪತಿ ಮಲ್ಲಪ್ಪ ಉಳ್ಳಾಗಡ್ಡಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಕೊಲೆ ಯಾಕೆ..?
ಪತ್ನಿಗೆ ಶ್ರೀಶೈಲ ಎಂಬ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ 2017ರಲ್ಲಿ ಜಗಳವಾಗಿತ್ತು. ಅಲ್ಲದೆ ಇದೇ ಕಾರಣಕ್ಕೆ ಶ್ರೀಶೈಲ ಮೇಲೆ ಮಾರಣಾಂತಿಕೆ ಹಲ್ಲೆಯನ್ನು ಕೂಡ ಮಲ್ಲಪ್ಪ ಮಾಡಿದ್ದನು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಗಂಡನ ವಿರುದ್ಧ ಸುಮಿತ್ರಾ ಸಾಕ್ಷಿ ಕೂಡ ಹೇಳಿದ್ದರು.

ತನ್ನ ವಿರುದ್ಧ ಸಾಕ್ಷಿ ಹೇಳಿದ್ದರಿಂದ ಪತ್ನಿ ಮೇಲಿನ ಕೋಪ ಮಲ್ಲಪ್ಪನಿಗೆ ಮತ್ತಷ್ಟು ಹೆಚ್ಚಾಗಿತ್ತು. ಹೀಗಾಗಿ ಆಕೆಯನ್ನು ಕೊಲೆ ಮಾಡುವ ತೀರ್ಮಾನ ಮಾಡಿದ್ದನು. ಇತ್ತ ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಮೊದಲು ಪತ್ನಿಯ ಕೊಲೆಗೆ ಸ್ಕೆಚ್ ಹಾಕಿದ್ದನು. ಅಂತೆಯೇ ಮನೆ ಸಮೀಪ ಪತ್ನಿಯನ್ನು ಬರ್ಬರವಾಗಿ ಕೊಂದು ಪರಾರಿಯಾಗಿದ್ದಾನೆ.


Spread the love

About Laxminews 24x7

Check Also

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ-48 ರ ಆರು ಪಥಗಳ ಕಾಮಗಾರಿ ಅಂತಿಮ ಹಂತದಲ್ಲಿ; ಪ್ರಯಾಣಿಕರಿಗೆ ಶೀಘ್ರವೇ ಸುಗಮ ಸಂಚಾರಕ್ಕೆ ಮುಕ್ತ: ಸಂಸದ ಈರಣ್ಣ ಕಡಾಡಿ

Spread the loveಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-48 ರ ಪುಣೆ-ಬೆಂಗಳೂರು ವಿಭಾಗದ ಆರು ಪಥಗಳ ಕಾಮಗಾರಿಯು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ