ಬೆಳಗಾವಿ : ಕೃಷಿ ಮಸೂದೆ ತಿದ್ದುಪಡಿ ಖಂಡಿಸಿ ದೆಹಲಿ, ಬೆಂಗಳೂರಿನಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ, ಗುರುವಾರ ಸುವರ್ಣ ವಿಧಾನಸೌಧದ ಎದುರು ಅನ್ನದಾತರು ಪ್ರತಿಭಟನೆ ನಡೆಸಿದರು.
ಕೃಷಿ ಮಸೂದೆ ತಿದ್ದುಪಡಿ ವಾಪಸ್ ಪಡೆಯುವಂತೆ ರೈತರು ಹೋರಾಟ ನಡೆಸುತ್ತಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಸ್ಪಂಧಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದರು. ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಧರಣಿ ಕುಳಿತು, ಪ್ರತಿಭಟನೆ ನಡೆಸಿದರು.
‘ ಕೇಂದ್ರ ಸರ್ಕಾರ ರೈತರ ಬಾಳಲ್ಲಿ ಆಟವಾಡುತ್ತಿದೆ. ರೈತರಿಗೆ ಮಾರಕವಾಗಿರುವ ಮಸೂದೆಯನ್ನು ಅಂಗೀಕಾರ ಮಾಡಿದೆ. ತಕ್ಷಣ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯಬೇಕು. ಅಲ್ಲಿಯವರೆಗೂ ಹೋರಾಟ ನಿರಂತರವಾಗಿರುತ್ತದೆ’ ಎಂದು ರೈತ ಸಂಘದ ಚಿಕ್ಕೋಡಿ ಜಿಲ್ಲಾಧ್ಯಕ್ಷ ರಾಜು ಪವಾರ್ ಎಚ್ಚರಿಕೆ ನೀಡಿದ್ದಾರೆ.
ಸುವರ್ಣ ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ ಇದೆ. ಇದರಿಂದ ಸುವರ್ಣ ವಿಧಾನಸೌಧತ್ತ ಹೊರಟ ರೈತರನ್ನು ಪೊಲೀಸರು ತಡೆದಿದ್ದಾರೆ. ಸುವರ್ಣ ವಿಧಾನಸೌಧ ಸುತ್ತಲೂ ಪೊಲೀಸ ಬೀಗಿ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದೆ.
ರೈತ ಮುಖಂಡರಾದ ಚೂನಪ್ಪ ಪೂಜಾರಿ, ಜಯಶ್ರೀ ಗುರನ್ನವರ, ರೈತ ಮುಖಂಡರು, ನೂರಾರು ರೈತ ಮಹಿಳೆರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.