Breaking News

45 ದಿನಗಳಲ್ಲಿ ನಾವಿಕರ ಕುಟುಂಬ ಗಳಿಸಿದ್ದು ಬರೋಬ್ಬರಿ 30 ಕೋಟಿ ರೂ.

Spread the love

ಪ್ರಯಾಗ್​ರಾಜ್, ಮಾರ್ಚ್​ 05: ಮಹಾಕುಂಭ ಮೇಳವು ನಿಜವಾಗಿಯೂ ಕೋಟ್ಯಂತರ ಜನರ ಮನಸ್ಸಿನಲ್ಲಿ ಅಳಿಸಲಾಗದ ನೆನಪಾಗಿ ಉಳಿದಿದೆ. ಈ ಮಹಾ ಕುಂಭದಲ್ಲಿ ಒಂದೆಡೆ ಧರ್ಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಚರ್ಚೆ ನಡೆಯಿತು. ಮತ್ತೊಂದೆಡೆ, ಮಹಾ ಕುಂಭವು ಜನರಿಗೆ ಆದಾಯದ ಮೂಲವೂ ಆಗಿತ್ತು. ನಾವಿಕ ಕುಟುಂಬವೊಂದು 45 ದಿನಗಳಲ್ಲಿ ಬರೋಬ್ಬರಿ 30 ಕೋಟಿ ರೂ.ಗಳನ್ನು ಗಳಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಈ ಕುರಿತು ಮಾತನಾಡಿದ್ದಾರೆ.

ನಾವಿಕ ಕುಟುಂಬವು ಪ್ರಯಾಗ್‌ರಾಜ್‌ನ ನೈನಿಯ ಅರೈಲ್‌ನವರು. ಈ ಕುಟುಂಬದ ಮುಖ್ಯ ಕಸುಬು ದೋಣಿ ನಡೆಸುವುದು. ಮಹಾ ಕುಂಭ ಮೇಳದ ನಂತರ ಈ ಕುಟುಂಬದಲ್ಲಿ ಸಂತೋಷದ ವಾತಾವರಣವಿದೆ. ಮಹಾಕುಂಭ ಮೇಳವೇ ಇವರ ಬದುಕಿನಲ್ಲಿ ನಗು ತರಿಸಿದೆ. ಮಹಾಕುಂಭದಲ್ಲಿ ಸುಮಾರು 66 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದರು. ಇದರಿಂದಾಗಿ ಈ ಕುಟುಂಬಕ್ಕೆ 45 ದಿನಗಳ ಕಾಲ ಕೆಲಸ ಸಿಕ್ಕಿತು ಮತ್ತು ಅವರ ದೋಣಿ ಒಂದು ದಿನವೂ ಖಾಲಿಯಾಗಿರಲಿಲ್ಲ.

ಈ ಕುಟುಂಬವು ನೂರಕ್ಕೂ ಹೆಚ್ಚು ದೋಣಿಗಳನ್ನು ಹೊಂದಿದ್ದು, ಪ್ರತಿ ದೋಣಿಯು 7 ರಿಂದ 10 ಲಕ್ಷ ರೂ.ಗಳ ವಹಿವಾಟು ನಡೆಸುತ್ತದೆ. ಗಳಿಸಿದ ಒಟ್ಟು ಮೊತ್ತವನ್ನು ಸೇರಿಸಿದರೆ, ಅದು ಸುಮಾರು 30 ಕೋಟಿ ರೂ.ಗಳಾಗುತ್ತದೆ. ಈ ರೀತಿಯಾಗಿ, ಇಡೀ ಕುಟುಂಬ ಸುಮಾರು 30 ಕೋಟಿ ರೂ.ಗಳನ್ನು ಗಳಿಸಿತು.ದೋಣಿ ವಿಹಾರಿ ಪಿಂಟು ಮಹಾರ ಮತ್ತು ಅವರ ತಾಯಿ ಶುಕ್ಲಾವತಿ ತಮ್ಮ ಮನೆಯಲ್ಲಿ ಜನರಿಗೆ ಸಿಹಿತಿಂಡಿಗಳನ್ನು ತಿನ್ನಿಸಿ ಸಂತಸಪಟ್ಟರು. ಯೋಗಿ ಸರ್ಕಾರ ಮಹಾ ಕುಂಭದಲ್ಲಿ ಮಾಡಿದ ವ್ಯವಸ್ಥೆಗಳಿಂದ ಭಕ್ತರ ಸಂಖ್ಯೆ ಹೆಚ್ಚಾಯಿತು ಎಂದು ಹೇಳಿದ್ದಾರೆ.

ಮಹಾರ ಕುಟುಂಬದ 500 ಕ್ಕೂ ಹೆಚ್ಚು ಸದಸ್ಯರು ದೋಣಿ ವಿಹಾರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಬಳಿ ನೂರಕ್ಕೂ ಹೆಚ್ಚು ದೋಣಿಗಳಿವೆ. ಕುಂಭ ಮೇಳದಲ್ಲಿ ಹೋಟೆಲ್ ಉದ್ಯಮದಲ್ಲಿ 40,000 ಕೋಟಿ ರೂ., ಆಹಾರ ಮತ್ತು ದೈನಂದಿನ ಅಗತ್ಯ ವಸ್ತುಗಳಲ್ಲಿ 33,000 ಕೋಟಿ ರೂ., ಸಾರಿಗೆಯಲ್ಲಿ 1.5 ಲಕ್ಷ ಕೋಟಿ ರೂ., ಧಾರ್ಮಿಕ ಕೊಡುಗೆಗಳಲ್ಲಿ 20,000 ಕೋಟಿ ರೂ., ದೇಣಿಗೆಗಳಲ್ಲಿ 660 ಕೋಟಿ ರೂ., ಟೋಲ್ ತೆರಿಗೆಯಲ್ಲಿ 300 ಕೋಟಿ ರೂ., ಇತರ ಆದಾಯದಲ್ಲಿ 66,000 ಕೋಟಿ ರೂ. ಗಳಿಸಿದೆ ಎಂದರು.

ಮಹಾ ಕುಂಭಮೇಳದ ಮೂಲಕ, ದಶಕಗಳಿಗೆ ನಗರಕ್ಕೆ ಪ್ರಯೋಜನಕಾರಿಯಾಗುವ ಮೂಲಸೌಕರ್ಯಗಳನ್ನು ನಾವು ಒದಗಿಸಿದ್ದೇವೆ. 200 ಕ್ಕೂ ಹೆಚ್ಚು ರಸ್ತೆಗಳನ್ನು ಅಗಲಗೊಳಿಸಲಾಗಿದೆ, 14 ಫ್ಲೈಓವರ್‌ಗಳು, ಒಂಬತ್ತು ಅಂಡರ್‌ಪಾಸ್‌ಗಳು ಮತ್ತು 12 ಕಾರಿಡಾರ್‌ಗಳನ್ನು ನಿರ್ಮಿಸಲಾಗಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ