Breaking News

ಹಣ ಮರುಪಾವತಿಸದ್ದಕ್ಕೆ ಗೆಳೆಯನನ್ನೇ ಕೊಲೆ ಮಾಡಿದ್ದ ಐವರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

Spread the love

ಹಾಸನ: ಸಾಲದ ಹಣ ಮರುಪಾವತಿಸದ್ದಕ್ಕೆ ಗೆಳೆಯನನ್ನೇ ಕೊಲೆ ಮಾಡಿದ್ದ ಐವರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.ಭವಿತ್, ತೇಜಸ್, ಪುನೀತ, ನವೀನ್ ಮತ್ತು ವಿವೇಕ್ ಬಂಧಿತ ಆರೋಪಿಗಳು. ಡಿಸೆಂಬರ್ 5 ರಂದು ರಾತ್ರಿ ರಂಗೋಲಿಹಳ್ಳದ ಬಳಿ ರಘು ಎಂಬಾತನನ್ನು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ ಹತ್ಯೆ ಮಾಡಿದ್ದರು. ಆರೋಪಿಗಳೆಲ್ಲರೂ ಕೊಲೆಯಾದವನ ಸ್ನೇಹಿತರಾಗಿದ್ದರು. ಹತ್ಯೆಯಾದ ರಘು ತೇಜಸ್ ಎಂಬಾತನಿಂದ ಒಂದೂವರೆ ಲಕ್ಷ ಸಾಲ ಪಡೆದಿದ್ದ. ಸಾಲದ ಹಣ ಹಿಂದಿರುಗಿಸಲು ರಘು ನಿರಾಕರಿಸಿದ್ದ. ಈ ವಿಚಾರವಾಗಿ ರಘು, ತೇಜಸ್ ಇತರರ ನಡುವೆ ಜಗಳ ನಡೆದಿತ್ತು.

ಇದರಿಂದ ಕೋಪಿತರಾದ ತೇಜಸ್ ಮತ್ತು ಆತನ ನಾಲ್ವರು ಸಹಚರರು ಸೇರಿ ರಘುನನ್ನು ಮುಗಿಸಲು ಸ್ಕೆಚ್ ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಈ ವೇಳೆ ಕೊಲೆಗಡುಕರಿಂದ ತಪ್ಪಿಸಿಕೊಳ್ಳಲು ರಘು ಟೀ ಅಂಗಡಿಗೆ ನುಗ್ಗಿದ್ದ. ಆರೋಪಿಗಳು ಟೀ ಅಂಗಡಿಗೆ ನುಗ್ಗಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಇದೀಗ ಗೆಳೆಯನನ್ನು ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

ಕಡೋಲಿಯಲ್ಲಿ ನೂತನ ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಶಂಕು ಸ್ಥಾಪನೆ

Spread the love ಕಡೋಲಿಯಲ್ಲಿ ನೂತನ ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಶಂಕು ಸ್ಥಾಪನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ