ಬೆಂಗಳೂರು: ಮುಡಾ ವಿರುದ್ಧ ದೋಸ್ತಿ ಪಾದಯಾತ್ರೆ ರಾಜಕೀಯ ಪ್ರೇರಿತ ಎಂದು ಮೊದಲೇ ಹೇಳಿದ್ದೆ. ಲೋಕಾಯುಕ್ತ ಸಂಸ್ಥೆ ಸ್ವತಂತ್ರ್ಯವಾಗಿದ್ದು, ಮುಖ್ಯಮಂತ್ರಿಗಳ ನಿಯಂತ್ರಣದಲ್ಲಿರಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದಾಗಲೇ ಬಿಜೆಪಿ ಮತ್ತು ಜೆ.ಡಿ.ಎಸ್. ಬಗ್ಗೆ ಇದು ರಾಜಕೀಯ ಪ್ರೇರಿತ ಎಂದು ಹೇಳಿದ್ದೆ. ಕ್ಲೇಮ್ ಕೇಳಿದಾಗ ನೀಡಿದ್ದಾರೆ. ಲೋಕಾಯುಕ್ತ ಒಂದು ಸ್ವತಂತ್ರ್ಯ ಸಂಸ್ಥೆ ಇಲ್ಲಿ ಯಾವುದೇ ಪ್ರಭಾವವಿಲ್ಲ. ಯಾವುದಾದರೂ ಕೇಸ್ ಹಾಕಲು ಎವಿಡೆನ್ಸ ಇರಬೇಕು. ಇದೆಲ್ಲವೂ ಬಿಜೆಪಿಯ ರಾಜಕೀಯ ಪ್ರೇರಿತ ಕೆಲಸ. ಇದೆಲ್ಲ ಬಹಳಷ್ಟು ದಿನ ನಡೆಯಲ್ಲ ಎಂದರು.
ಈಗಾಗಲೇ ಉಚ್ಛ ನ್ಯಾಯಾಲಯವು ಮುಡಾಗೆ ಸಂಬಂಧಿಸಿದಂತೆ ಆದೇಶವನ್ನು ನೀಡಿದೆ. ಪ್ರತಿಯೊಂದು ಕೇಸನ್ನು ಸಿಎಂ ಹೇಳಿದಂತೆಯೇ ಪೊಲೀಸ್ ಇಲಾಖೆ ಕೇಳುತ್ತಾರಾ ಎಂದು ಪ್ರಶ್ನಿಸಿದ ಅವರು, ಲೋಕಾಯುಕ್ತ ಸಂಸ್ಥೆಯೂ ಸ್ವತಂತ್ರ್ಯ ಸಂಸ್ಥೆಯಾಗಿದೆ. ಇದರ ಮೇಲೆ ಮುಖ್ಯಮಂತ್ರಿ ಕಂಟ್ರೋಲ್ ಇಲ್ಲ ಎಂದರು.