ಬೆಳಗಾವಿ: ಸಂಬಂಧಿಕರ ಜಮೀನಿನಲ್ಲಿ ಆಟವಾಡಲು ಹೋದ ಇಬ್ಬರು ಬಾಲಕರು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಬೆಕ್ಕಿನಕೇರಿಯಲ್ಲಿ ನಡೆದಿದೆ.
ಮೃತ ಬಾಲಕರನ್ನು ಲೋಕೇಶ ವಿಠಲ (10) ಹಾಗೂ ನಿಕೀಲ (7) ಎಂದು ಗುರುತಿಸಲಾಗಿದೆ.
ಬಾಳು ಮಲ್ಲಪ್ಪ ಗಾವಡೆ ಎಂಬುವವರ ಜಮೀನೊಂದರಲ್ಲಿ ಆಟವಾಡಲೆಂದು ಮೂವರು ಬಾಲಕರು ಹೋಗಿದ್ದಾರೆ. ಈ ವೇಳೆಮೀನು, ಏಡಿ ಹಿಡಿಯಲೆಂದು ಬಾವಿಯತ್ತ ಸಾಗಿದ ಇಬ್ಬರು ಬಾಲಕರು, ಏಕಾಏಕಿ ಬಾವಿಗೆ ಬಿದ್ದಿದ್ದಾರೆ.
ಇನ್ನೋರ್ವ ಬಾಲಕ ರಕ್ಷಣೆಗಾಗಿ ಕೋಗಿದ್ದಾನೆ. ಗ್ರಾಮಸ್ಥರು ಬಂದು ರಕ್ಷಿಸುವಷ್ಟರಲ್ಲಿ ಇಬ್ಬರು ಬಾಲಕರು ಸಾವನ್ನಪ್ಪಿದ್ದರು.
Laxmi News 24×7