ಅರಕಲಗೂಡು (ಹಾಸನ) : “ತುಂಬಾ ಪವರ್ಫುಲ್ ಪ್ರಧಾನಿ ಆಗಿರುವ ವಿಶ್ವಗುರುಗೆ ನಮ್ಮ ದೇಶದ ಮತದಾರರ ಪಟ್ಟಿಯನ್ನು ಕೊಡಲು ತೊಂದರೆ ಇದೆಯಾ” ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಸಂತೋಷ್ ಲಾಡ್ ಅವರು ವಾಗ್ದಾಳಿ ನಡೆಸಿದ್ದಾರೆ.
ಪಟ್ಟಣದಲ್ಲಿ ಖಾಸಗಿಯಾಗಿ ನಡೆಯುತ್ತಿರುವ ಸಿದ್ದರಾಮಯ್ಯ ಕ್ರಿಕೆಟ್ ಕಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಅಥವಾ ಚುನಾವಣಾ ಕಮಿಷನ್ನವರಾಗಲಿ ಎಲೆಕ್ಷನ್ ವೋಟಿಂಗ್ ಪ್ಯಾಟರ್ನ್ಅನ್ನು ಕೊಡದಂತೆ ಕಾನೂನನ್ನೇ ತಂದಿದ್ದಾರೆ. ಈ ಹೊಸ ಕಾನೂನಿನಿಂದಾಗಿ ವೋಟರ್ ಲಿಸ್ಟ್ ಕೇಳಿದರೇ ಕೊಡುತ್ತಿಲ್ಲ. ಅದಕ್ಕೆ ಬಿಜೆಪಿಯವರನ್ನು ಕೇಳಿನೋಡಿ.
ಈ ಬಗ್ಗೆ ಎಲ್ಲೋ ಒಂದು ರೀತಿಯಲ್ಲಿ ಟ್ಯಾಂಪರಿಂಗ್ ಆಗುತ್ತಿದೆ ಎಂಬುದು ನನ್ನ ನಂಬಿಕೆಯಾಗಿದೆ” ಎಂದು ಸಂಶಯ ವ್ಯಕ್ತಪಡಿಸಿದರು.”ಅಲ್ಲದೆ ವಿಪಕ್ಷಗಳು ಕೂಡ ಈ ಬಗ್ಗೆ ಮಾತನಾಡಿಕೊಳ್ಳುತ್ತಿವೆ. ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ತಕ್ಷಣ ಇಂತಹ ಮಾತು ಕೇಳಿಬರುತ್ತಿವೆ. ಬರೀ ವೋಟಿಂಗ್ ಮಷಿನ್ ಅಲ್ಲ. ಇಡೀ ಸರ್ಕಾರದ ಮಷಿನರಿಯನ್ನೇ ಬಳಕೆ ಮಾಡುತ್ತಿದ್ದಾರೆ. ಕೇಜ್ರಿವಾಲ್ರನ್ನು ಜೈಲಿಗೆ ಹಾಕಿದರು. ಈ ಬಗ್ಗೆ ಏನೂ ಕಾರಣ ಎಂಬುದು ತಿಳಿದಿಲ್ಲ. ಈ ರೀತಿಯ ಹಲವಾರು ವಿಷಯಗಳು ಇವೆ” ಎಂದು ಲಾಡ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Laxmi News 24×7