ಉಡುಪಿ: ಸೂರ್ಯಾಸ್ತ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಶುರುವಾಗಿದೆ. ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಸಂಜೆಯೇ ಮಳೆ ಆರಂಭ ಆಗಿತ್ತು. ಸಾಗರ ತೀರದ ತಾಲೂಕುಗಳಲ್ಲಿ ಎರಡು ಗಂಟೆ ವರ್ಷಧಾರೆಯಾಗಿದೆ.
ಅರಬ್ಬಿ ಸಮುದ್ರದ ಸಾಲಿನ ತಾಲೂಕುಗಳಾದ ಉಡುಪಿ, ಕಾಪು, ಕುಂದಾಪುರದಲ್ಲಿ ಜೋರು ವರ್ಷಧಾರೆಯಾಗಿದೆ. ಬೈಂದೂರು ತಾಲೂಕಿನ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಪಶ್ಚಿಮ ಘಟ್ಟದ ತಪ್ಪಲಲ್ಲಿ ಗಾಳಿ ಸಹಿತ ಮಳೆಯಾಗಿದೆ. ಇಂದು ದಿನಪೂರ್ತಿ ಉಷ್ಟಾಂಶ ಹೆಚ್ಚಾಗಿತ್ತುಉಡುಪಿ ಜಿಲ್ಲೆಯಲ್ಲಿ ದಿಢೀರ್ ಮಳೆಯಾಗಿದ್ದರಿಂದ ಪೇಟೆಯೊಳಗೆ ಜನಜೀವನ ಅಸ್ತವ್ಯಸ್ಥವಾಗಿತ್ತು. ಮಳೆ ಜೊತೆ ಗುಡುಗು ಮಿಂಚು ಇದೆ. ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತ ಆಗಿದೆ. ಸುಮಾರು ಎರಡು ಗಂಟೆ ಮಳೆ ಬಿದ್ದ ಕಾರಣ ವಾತಾವರಣ ತಂಪಾಗಿದೆ. ಭತ್ತದ ಎರಡನೇ ಬೆಳೆಗೆ ಈ ಮಳೆ ವರದಾನವಾಗಿದ್ದು, ಅಡಿಕೆಗೆ ಅಡ್ಡಿಯಾಗಿದೆ.