ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ರಾಜಕೀಯ ಮಹತ್ವಾಕಾಂಕ್ಷೆಗಳು ಮತ್ತೇನಾದರೂ ಉಳಿದೆವೆಯಾ?
ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ, ಮಗಳು ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿಯಿಂದ ಸಂಸದೆ ಮತ್ತು ಈಗ ಮಗ ರಾಹುಲ್ ಜಾರಕಿಹೊಳಿ ರಾಜ್ಯ ಯೂಥ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ!
ಸತೀಶ್ ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಕನಸೊಂದಿದೆ. ಅದಾಗಿಬಿಟ್ಟರೆ ಅವರ ಸಂಪುಟದಲ್ಲಿ ರಾಹುಲ್ ಜಾರಕಿಹೊಳಿ ಸಚಿವನಾಗಬಹುದೇನೋ?
ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ರಾಹುಲ್ ರನ್ನು ಪಟಾಕಿ ಸಿಡಿಸಿ ಪುಷ್ಟವೃಷ್ಟಿ ಮಾಡಿ, ಅರತಿ ಬೆಳಗಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಳ್ಳಲಾಯಿತು.