Breaking News

ಏರೋ ಇಂಡಿಯಾ – 2025 ಉದ್ಘಾಟನೆಗೆ ಕ್ಷಣಗಣನೆ

Spread the love

ಬೆಂಗಳೂರು: ಏಷ್ಯಾದ ಅತಿ ದೊಡ್ಡ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ರಾಜಧಾನಿಯು ಸಕಲ ರೀತಿಯಲ್ಲಿ ಸಜ್ಜಾಗಿದೆ. ಇಂದು ಬೆಳಗ್ಗೆ 9.30ಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏರ್ ಶೋಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ ಫೆ.14ವರೆಗೆ ಏರ್ ಶೋ ನಡೆಯಲಿದ್ದು, ಸುರಕ್ಷತೆ ಹಾಗೂ ಭದ್ರತೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ. 7 ಏಳು ಲಕ್ಷಕ್ಕೂ ಅಧಿಕ ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ.

ಎಐ ಆಧಾರಿತ ಭದ್ರತೆ: ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಅನಧಿಕೃತ ಡ್ರೋನ್ ಚಟುವಟಿಕೆ ನಿಗ್ರಹಕ್ಕೆ ಈಗಾಗಲೇ ಕೆಂಪು ಡ್ರೋನ್ ವಲಯಗಳನ್ನು ಗುರುತಿಸಲಾಗಿದೆ. ತ್ವರಿತ ಸಹಾಯ ಮತ್ತು ತುರ್ತು ಬೆಂಬಲ ಒದಗಿಸಲು ಆಯಕಟ್ಟಿನ ಜಾಗಗಳಲ್ಲಿ ಕ್ಷಿಪ್ರ ಮೊಬೈಲ್ ಘಟಕಗಳನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಈ ಬಾರಿ ಏರ್ ಶೋಗೆ ಎಐ ಆಧಾರಿತ ಭದ್ರತೆಗೆ ಆದ್ಯತೆ ನೀಡಲಾಗಿದೆ.

ಏರೋ ಇಂಡಿಯಾ-2025 ಮೊಬೈಲ್ ಅಪ್ಲಿಕೇಶನ್: ಯಲಹಂಕ ವಾಯುನೆಲೆ ಸುತ್ತಮುತ್ತ 24 ಗಂಟೆ ಸಿಸಿ ಕ್ಯಾಮರಾ ಮೇಲ್ವಿಚಾರಣೆ ನಡೆಸಲಾಗುತ್ತದೆ. ತುರ್ತು ಪರಿಸ್ಥಿತಿ ನಿರ್ವಹಿಸಲು ವಿಪತ್ತು ನಿರ್ವಹಣೆ ಮತ್ತು ಅಗ್ನಿ ಸುರಕ್ಷತಾ ಸಮಿತಿ ಸಜ್ಜಾಗಿದೆ. ಲಕ್ಷಾಂತರ ಜನರು ಒಂದೆಡೆ ಸೇರುವುದರಿಂದ ನೆಟ್ ವರ್ಕ್ ಜಾಮ್ ಆಗದಂತೆ ತಾತ್ಕಾಲಿಕ ಮೊಬೈಲ್ ಟವರ್‌ಗಳು ಮತ್ತು ನೆಟ್‌ವರ್ಕ್ ಬೂಸ್ಟರ್‌ಗಳನ್ನು ಅಳವಡಿಸಲಾಗಿದೆ. ಲೈವ್ ಅಪ್‌ಡೇಟ್, ಸಂಚಾರಕ್ಕೆ ಸಹಕರಿಸುವ ಮತ್ತು ಕಾರ್ಯಕ್ರಮದ ವೇಳಾಪಟ್ಟಿ ಡಿಸ್ ಫ್ಲೆ ಮೀಸಲಾದ ಏರೋ ಇಂಡಿಯಾ-2025 ಮೊಬೈಲ್ ಅಪ್ಲಿಕೇಶನ್​​ನಲ್ಲಿ ಸಹ ಬರಲಿದೆ.


Spread the love

About Laxminews 24x7

Check Also

ಅರೆಸ್ಟ್​​ ವಾರೆಂಟ್​ ಎಚ್ಚರಿಗೆ ಬೆನ್ನಲ್ಲೇ ಕೋರ್ಟ್​​ಗೆ ಓಡೋಡಿ ಬಂದ ಸಚಿವ ಮುನಿಯಪ್ಪ

Spread the loveಬೆಂಗಳೂರು, ಮಾರ್ಚ್​ 12: 2013ರ ಹಲ್ಲೆ ಅಟ್ರಾಸಿಟಿ ಕೇಸ್​​ಗೆ ಸಂಬಂಧಿಸಿದಂತೆ ರಾಬರ್ಟ್‌ಸನ್‌ ಪೇಟೆ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ