ಕೋಲಾರ: ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರಿಗೂ ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವುದು ಬೇಕಿಲ್ಲ, ಅದರೆ ಅದನ್ನು ಅವರು ಹೇಳುವ ರೀತಿ ಬೇರೆಯಾಗಿದೆ.
ದೆಹಲಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ತನ್ನ ಹೆಸರು ಉಲ್ಲೇಖಿಸಿರುವುದಕ್ಕೆ ಹಿಗ್ಗಿರುವ ಅವರು ಯಡಿಯೂರಪ್ಪರನ್ನು ದಕ್ಷಿಣ ಭಾರತದ ಭೀಷ್ಮ ಮತ್ತು ತನ್ನ ತಂದೆಯ ಸಮಾನ ಹಾಗೂ ವಿಜಯೇಂದ್ರರನ್ನು ತಮ್ಮ ಕಿರಿಯ ಸಹೋದರ ಎನ್ನುತ್ತ ತಾವು ಯಡಿಯೂರಪ್ಪ ಕುಟುಂಬದ ಒಂದು ಭಾಗ ಎನ್ನುತ್ತಾರೆ.
ಹಿಂದೆ ಯಡಿಯೂರಪ್ಪ ತಮ್ಮ ಮಗನಿಗೆ ಬಿಜೆಪಿ ರಾಜ್ಯಾಧ್ಯಕ್ಷನ ಪಟ್ಟ ಕಟ್ಟಿಸಿದಂತೆ, ಹಿಂದುಳಿದ ವರ್ಗದವನಾದ ತನಗೆ ಒಂದು ಅವಕಾಶ ಮಾಡಿಕೊಡಲಿ ಎಂದು ಶ್ರೀರಾಮುಲು ಹೇಳುತ್ತಾರೆ.