Breaking News

ಥಿನ್ನರ್ ಸೇವಿಸಿ ಬಾಲಕ ಸಾವು

Spread the love

ರಾಯಚೂರು, ಫೆಬ್ರವರಿ 05: ಪೇಂಟ್‌ನಲ್ಲಿ ಬಳಸುವ ಥಿನ್ನರ್ ಸೇವಿಸಿ ಬಾಲಕ (Child) ಸಾವನ್ನಪ್ಪಿರುವಂತಹ ಘಟನೆ  ಜಿಲ್ಲೆಯ ಮಾನ್ವಿ ತಾಲೂಕಿನ ಹಿರೆಕೊಟ್ನೇಕಲ್‌ನಲ್ಲಿ ನಡೆದಿದೆ. ರಮೇಶ್ ನಾಯಕ್ ಪುತ್ರ ಶಿವಾರ್ಜುನ ನಾಯಕ್(3) ಮೃತ ಬಾಲಕ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಜಾತ್ರೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿದೀಗ ಸೂತಕದ ಛಾಯೆ ಆವರಿಸಿದೆ.

ಗ್ರಾಮದಲ್ಲಿ ಜಾತ್ರೆ ಹಿನ್ನೆಲೆ ಮನೆಗೆ ಪೇಂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬಾಲಕ ಶಿವಾರ್ಜುನ ಥಿನ್ನರ್ ಸೇವಿಸಿದ್ದಾನೆ. ಈ ವೇಳೆ ಶಿವಾರ್ಜುನ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಸ್ಥಳೀಯ ಮಾನ್ವಿ ಖಾಸಗಿ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಮೊದಲನೇ ಗಂಡನ ಮೇಲಿನ ಕೋಪಕ್ಕೆ 8 ವರ್ಷದ ಮಗನಿಗೆ ಬರೆ ಎಳೆದ ತಾಯಿ

ಗಂಡನ ಮೇಲಿನ ಕೋಪಕ್ಕೆ 8 ವರ್ಷದ ಮಗನಿಗೆ ತಾಯಿ ಬರೆ ಹಾಕಿರುವಂತಹ ಘಟನೆ ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ನಡೆದಿದೆ. ಕಳೆದ ಐದು‌ ದಿನಗಳ‌ ಹಿಂದೆ ಘಟನೆ ನಡೆದಿದ್ದು, ತಡವಾಗಿ ಕೃತ್ಯ ಬೆಳಕಿಗೆ‌ ಬಂದಿದೆ. ಚಿತ್ರದುರ್ಗದ ಮಹಿಳಾ‌ ಠಾಣೆ‌ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ.

ಕಳೆದ ಏಳು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ತಾಯಿ ನಗ್ಮಾ, ಬಳಿಕ‌ ಎರಡನೇ ವಿವಾಹವಾಗಿದ್ದರು. ಎರಡನೇ ಮದುವೆ ಬಳಿಕ ಇಬ್ಬರು ಹೆಣ್ಮಕ್ಕಳ ಜನನವಾಗಿದೆ. ಮಾಜಿ ಗಂಡನ ಮೇಲಿನ ಸಿಟ್ಟಿನಿಂದ ಮಗನಿಗೆ ಬರೆ ಹಾಕಿದ್ದಾರೆ. ನಗ್ಮಾ‌ ವಿರುದ್ಧ ಮಾಜಿ ಗಂಡ‌ ಅನಿಲ (ಮುಭಾರಕ್)ನ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡನೇ ಗಂಡ ಇರ್ಫಾನ್ ಜೊತೆಗೂ ನಗ್ಮಾ ಕಿರಿಕಿರಿ ಮಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಎಂಆರ್​ಪಿ ಬಾರ್​ನಲ್ಲಿ ಹೆಚ್ಚಿನ ಹಣ ವಸೂಲಿ ಹಿನ್ನಲೆ ರೊಚ್ಚಿಗೆದ್ದ ಮದ್ಯಪ್ರಿಯರಿಂದ ಬಾರ್ ಮುಂದೆಯೇ ಪ್ರತಿಭಟನೆ

Spread the loveಚಾಮರಾಜನಗರ, ಫೆಬ್ರವರಿ 05: ಎಂಆರ್​ಪಿ ಬಾರ್​ನಲ್ಲಿ ಹೆಚ್ಚಿನ ಹಣ ವಸೂಲಿ ಹಿನ್ನಲೆ ರೊಚ್ಚಿಗೆದ್ದ ಮದ್ಯಪ್ರಿಯರಿಂದ ಬಾರ್ ಮುಂದೆಯೇ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ