ಧಾರವಾಡ: ವಕೀಲರ ಆರೋಗ್ಯ ವಿಮೆ ಕೊಡದ ಆದಿತ್ಯ ಬಿರ್ಲಾ ವಿಮಾ ಕಂಪೆನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ, ಪರಿಹಾರ ನೀಡಲು ಆದೇಶಿಸಿದೆ.
ಧಾರವಾಡದ ನಿವಾಸಿ, ವಕೀಲ ಚೇತನ್ಕುಮಾರ ಈಟಿ ಎಂಬವರು 23,999 ರೂ ಮೌಲ್ಯದ ಹೊಸ ಮೊಬೈಲ್ ಅನ್ನು ಬಜಾಜ್ ಫೈನಾನ್ಸ್ ಕಂಪೆನಿಯಿಂದ ಸಾಲ ಪಡೆದು ಖರೀದಿಸಿದ್ದರು. ಆ ಮೊಬೈಲ್‌ಗೆ ಆದಿತ್ಯ ಬಿರ್ಲಾ ವಿಮಾ ಕಂಪೆನಿಯಲ್ಲಿ 1 ಲಕ್ಷ ರೂ. ಮೊತ್ತದ ಗ್ರೂಪ್ ಹೆಲ್ತ್ ವಿಮೆ ಮಾಡಿಸಿದ್ದರು.
23/02/2023ರಂದು ದೂರುದಾರರು ತಮ್ಮ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ಕಾಲು ನೋವು ಆಗಿದ್ದರಿಂದ ಮಾಳಮಡ್ಡಿಯ ಚಿರಾಯು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅದಕ್ಕಾಗಿ 1,25,000 ರೂಪಾಯಿ ಆಸ್ಪತ್ರೆ ಖರ್ಚು ಭರಿಸಿದ್ದರು.
![]()
ನಂತರ ವಿಮಾ ಪಾಲಿಸಿಯ ಕರಾರಿನಂತೆ ತಮ್ಮ ಆಸ್ಪತ್ರೆಯ ಖರ್ಚು ಕೊಡುವಂತೆ ಆದಿತ್ಯ ಬಿರ್ಲಾ ಆರೋಗ್ಯ ವಿಮಾ ಕಂಪೆನಿಗೆ ಎಲ್ಲ ದಾಖಲೆಗಳೊಂದಿಗೆ ಕ್ಲೈಮ್ ಮಾಡಿದ್ದರು. ಯಾವುದೇ ಸಕಾರಣ ನೀಡದೆ ಎದುರುದಾರ ವಿಮಾ ಕಂಪೆನಿಯವರು ದೂರುದಾರರ ಕ್ಲೈಮ್ ನಿರಾಕರಿಸಿದ್ದರು.ವಿಮಾ ಕಂಪೆನಿಯ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಹೇಳಿ ವಿಮಾ ಕಂಪೆನಿ ಮೇಲೆ ಕ್ರಮ ಕೈಗೊಂಡು ಹಾಗೂ ತನಗೆ ಪರಿಹಾರ ಕೊಡಿಸಬೇಕೆಂದು ಕೋರಿ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
Laxmi News 24×7