ಪ್ರಾಜೆಕ್ಟ್ ಹೆಲ್ಮೆಟ್” ರಸ್ತೆ ಸುರಕ್ಷಾ, ಜಾಗೃತಿ ಅಭಿಯಾನಕ್ಕೆ ಸಚಿವ ಸತೀಶ ಜಾರಕಿಹೊಳಿ ಚಾಲನೆ
ಗುಲಾಬಿ ಹೂವು ನೀಡಿ ಹೆಲ್ಮೆಟ್ ಧರಿಸುವಂತೆ ವಿನಂತಿ
ಬೆಳಗಾವಿ ನಗರ ಪೊಲೀಸ ವತಿಯಿಂದ ಹಮ್ಮಿಕೊಂಡ “ಪ್ರಾಜೆಕ್ಟ್ ಹೆಲ್ಮೆಟ್” ರಸ್ತೆ ಸುರಕ್ಷಾ, ಜಾಗೃತಿ ಮತ್ತು ಜಾರಿ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಚಾಲನೆಯನ್ನು ನೀಡಿದರು.
ಬೆಳಗಾವಿ ನಗರ ಪೊಲೀಸನ ವತಿಯಿಂದ ಹಮ್ಮಿಕೊಂಡಿದ್ದ “ಪ್ರಾಜೆಕ್ಟ್ ಹೆಲ್ಮೆಟ್” ರಸ್ತೆ ಸುರಕ್ಷಾ, ಜಾಗೃತಿ ಮತ್ತು ಜಾರಿ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಚಾಲನೆಯನ್ನು ನೀಡಿದರು. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದವರಿಗೆ ಗುಲಾಬಿ ಹೂವನ್ನು ನೀಡಿ, ಹೆಲ್ಮೆಟ್ ಧರಿಸುವಂತೆ ತಿಳಿಹೇಳಿದರು.
ಈ ವೇಳೆ ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಎಸಿಪಿ ಜೆ.ಎಂ. ಕಾಲಿಮಿರ್ಚಿ ಸೇರಿದಂತೆ ಇನ್ನುಳಿದ ಅಧಿಕಾರಿಗಳು ಮತ್ತು ಇನ್ನುಳಿದವರು ಭಾಗಿಯಾಗಿದ್ದರು.
Laxmi News 24×7