ಕಾಂಗ್ರೆಸ್ಸಿನ ಪ್ರಬಲ ಶಾಸಕ ಬಿ ಆರ್ ಪಾಟೀಲ್ ರಾಜೀನಾಮೆ ಕಾರಣವೇನು ಗೊತ್ತಾ…
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಆಘಾತ ಎದುರಾಗಿದ್ದು ಕಾಂಗ್ರೆಸ್ಸಿನ ಪ್ರಬಲ ಶಾಸಕ ಬಿ ಆರ್ ಪಾಟೀಲ್ ಅವರು ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಸಚಿವ ಸ್ಥಾನಕ್ಕಾಗಿ ನಾನು ಕೆಳಮಟ್ಟದ ರಾಜಕಾರಣ ಮಾಡುತ್ತಿಲ್ಲ ಎಂದು ಬಿ.ಆರ್. ಪಾಟೀಲ್ ಸ್ಪರ್ಷಪಡಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೊದಲೇ ರಾಜೀನಾಮೆ ಕೊಡುವ ನಿರ್ಧಾರವನ್ನು ಮಾಡಲಾಗಿತ್ತು. ರಾಜ್ಯಪಾಲರ ತೂಗುಗತ್ತಿ ತಲೆಯ ಮೇಲಿತ್ತು. ಅದು ಕ್ಲೀಯರ್ ಆಗುತ್ತಲೆ ರಾಜೀನಾಮೆ ನೀಡಲಾಗಿದೆ. ಯಾರ ಬಗ್ಗೆಯೂ ಅಸಮಾಧಾನವಿಲ್ಲ. ಮುಖ್ಯಮಂತ್ರಿಗಳಿಗೆ ಎಲ್ಲವನ್ನು ತಿಳಿಸಿದ್ದೇನೆ. ಅವರು ಕರೆದು ಮಾತನಾಡಲಿದ್ದಾರೆ. ರಾಜಕಾರಣದ ಬಗ್ಗೆ ಊಹಾಪೋಹಗಳು ಹಲವು ಎಂದರು.
ಸಮಸ್ಯೆಗಳಿದ್ದ ಹಿನ್ನೆಲೆ ರಾಜೀನಾಮೆ ಕೊಟ್ಟಿದ್ದೇನೆ. ಹಲವಾರು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಈಗ ಎರಡನೇ ಬಾರಿ ಅವರ ಗಮನಕ್ಕೆ ತಂದಿದ್ದೇನೆ. ಆದರೇ ಸಿಎಂ ಕೂಡ ಮುಡಾ ಸೇರಿದಂತೆ ಇನ್ನುಳಿದ ಒತ್ತಡದಲ್ಲಿದ್ದಾರೆ. ಕೊನೆಯವರೆಗೂ ಅವರ ಮಿತ್ರನಾಗಿ ಉಳಿಯುವೆ. ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಸಿಗುತ್ತಿಲ್ಲ.
ಗ್ಯಾರಂಟಿಗಳ ಹಿನ್ನೆಲೆ ಸಮರ್ಪಕ ಅನುದಾನ ಸಿಗದಿರುವುದು ಎಲ್ಲ ಶಾಸಕರ ಸಮಸ್ಯೆ. ಸಚಿವ ಸ್ಥಾನಕ್ಕಾಗಿ ನಾನು ಕೆಳಮಟ್ಟಕ್ಕೆ ಹೋಗಿ, ನಾನು ರಾಜಕಾರಣ ಮಾಡುವುದಿಲ್ಲ. ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.