ಕೊಪ್ಪಳ, ): ಒಂದೇ ಕುರ್ಚಿಗೆ ಇಬ್ಬರು ಅಧಿಕಾರಿಗಳ ನಡುವೆ ಗುದ್ದಾಟ ನಡೆದಿದೆ. ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಹುದ್ದೆಗೆ ತಿಪ್ಪಣ್ಣ ಸಿರಸಗಿ ಮತ್ತು ಪಿ ವೈ ಶೆಟ್ಟಪ್ಪನವರ ನಡುವೆ ಜಟಾಪಟಿ ನಡೆದಿದೆ. 8.9.2023 ರಂದು ಉಪನಿರ್ದೇಶಕರಾಗಿ ಬಂದಿದ್ದ ತಿಪ್ಪಣ್ಣ ಅವರನ್ನು 3.10.24ರಂದು ಕರ್ತವ್ಯಲೋಪ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿತ್ತು.
ಬಳಿಕ ತಿಪ್ಪಣ್ಣ ಹುದ್ದೆಗೆ ಪಿ ವೈ ಶೆಟ್ಟೆಪ್ಪ ಎನ್ನುವರನ್ನು ಸರ್ಕಾರ ನಿಯೋಜಿಸಿತ್ತು. ಆದ್ರೆ, ಇದೀಗ ತಿಪ್ಪಣ್ಣ ಅಮಾನತ್ತಿಗೆ ಕೆಎಟಿಯಿಂದ ತಡೆ ತಂದಿದ್ದಾರೆ. ಅಲ್ಲದೇ ಅಲ್ಲದೇ ಪಿ ವೈ ಶೆಟ್ಟಪ್ಪನವರ ನಿಯೋಜನೆ ಆದೇಶವನ್ನು ಸಹ ಕೆಎಟಿ ರದ್ದುಪಡಿಸಿದ್ದದೆ. ಹೀಗಾಗಿ ತಿಪ್ಪಣ್ಣ ಅವರು ಈಗ ಅದೇ ಕುರ್ಚಿ ಬೇಕೆಂದು ಪಟ್ಟು ಹಿಡಿದಿದ್ದಾರೆ.
ಆದ್ರೆ, ಪಿ ವೈ ಶೆಟ್ಟಪ್ಪ ಅವಕಾಶ ಮಾಡಿಕೊಡುತ್ತಿಲ್ಲ.ತಿಪ್ಪಣ್ಣ ಸಿರಸಗಿ ಅವರು ಕೊಪ್ಪಳ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಸೆಪ್ಟಂಬರ್ 2023 ರಿಂದ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದ್ರೆ ಕರ್ತವ್ಯಲೋಪ ಆರೋಪದ ಮೇಲೆ 2024 ರ ಅಕ್ಟೋಬರ್ 3 ರಂದು ಅಮಾನತ್ತಾಗಿದ್ದರು.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಿಪ್ಪಣ್ಣ ಸಿರಸಗಿಯನ್ನು ಅಮಾನತ್ತು ಮಾಡಿ, ಆ ಜಾಗಕ್ಕೆ ಪಿ ವೈ ಶೆಟ್ಟೆಪ್ಪನವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಆದ್ರೆ ತನ್ನನ್ನು ಅಮಾನತ್ತು ಮಾಡಿದ್ದು, ಮತ್ತು ಬೇರೆಯವರನ್ನು ನಿಯೋಜನೆ ಮಾಡಿದ್ದನ್ನು ಪ್ರಸ್ನಿಸಿ ತಿಪ್ಪಣ್ಣ ಸಿರಸಗಿ, ಬೆಳಗಾವಿ ಕೆಎಟಿ ಪೀಠದ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ಬೆಳಗಾವಿ ಕೆಎಟಿ ಪೀಠ, ತಿಪ್ಪಣ್ಣ ಅವರ ಅರ್ಜಿಯನ್ನು ಪುರಸ್ಕರಿಸಿದ್ದು, ಅಮಾನತ್ತು ಆದೇಶವನ್ನು ರದ್ದು ಮಾಡಿತ್ತು. ಜೊತೆಗೆ ಬೇರೆಯವರನ್ನು ನಿಯೋಜನೆ ಮಾಡಿದ್ದು ಕೂಡಾ ಸರಿಯಲ್ಲ ಅಂತ ಇದೇ ಜನವರಿ 20 ರಂದು ಆದೇಶ ಹೊರಡಿಸಿತ್ತು.