Breaking News

ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ, 55 ಸಾವಿರ ರೂ. ದಂಡ

Spread the love

ಮಂಗಳೂರು: 15 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 55 ಸಾವಿರ ರೂಪಾಯಿ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಫ್.ಟಿ.ಎಸ್.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಬೆಳ್ತಂಗಡಿ ತಾಲೂಕಿನ 43 ವರ್ಷದ ವ್ಯಕ್ತಿ ಶಿಕ್ಷೆಗೊಳಗಾದ ಅಪರಾಧಿ. ಆರೋಪಿ 15 ವರ್ಷದ ಅಪ್ರಾಪ್ತ ಬಾಲಕಿಯ ಮನೆಗೆ ಹೆಚ್ಚಾಗಿ ಬಂದು ಹೋಗಿ ಮನೆಯವರೊಂದಿಗೆ ಆತ್ಮೀಯನಾಗಿದ್ದನು. ಬಾಲಕಿ ಮನೆಯವರು ಇಲ್ಲದ ವೇಳೆ ಮನೆಗೆ ಬಂದು ಬಾಲಕಿ ವಿರೋಧಿಸಿದರೂ ಬಲವಂತವಾಗಿ ಮೈ-ಕೈ ಮುಟ್ಟುತ್ತಾ ಲೈಂಗಿಕವಾಗಿ ಉಪಯೋಗಿಸುತ್ತಿದ್ದನು. ಈ ವಿಚಾರವನ್ನು ತಂದೆ – ತಾಯಿಗೆ ಹೇಳಿದರೆ ನಿನಗೆ ಶಿಕ್ಷೆಯಾಗುತ್ತದೆ ಎಂದು ಹೆದರಿಸುತ್ತಾ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ನ. 2023ರಲ್ಲಿ ಬಾಲಕಿಯ ಕಾಲಿನಲ್ಲಿ ಊತ ಕಂಡು ಬಂದಿದ್ದು, ಬಾಲಕಿಯ ತಾಯಿ ಆರೋಪಿ ಬಳಿ ಈ ವಿಚಾರವನ್ನು ತಿಳಿಸಿದ್ದಲ್ಲದೇ ಆತನೊಂದಿಗೆ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಗರ್ಭಿಣಿ ಎಂದು ತಿಳಿಸಿದ್ದಾರೆ.

ಗರ್ಭಿಣಿ ಎಂದು ತಿಳಿದ ಕೂಡಲೇ ಆರೋಪಿ ತನ್ನ ಹೆಸರನ್ನು ಹೇಳಬೇಡ, ಬೇರೆ ಯಾರದ್ದಾದರೂ ಹೆಸರು ಹೇಳು, ಇಲ್ಲದಿದ್ದರೆ ನಮ್ಮಿಬ್ಬರಿಗೂ ಶಿಕ್ಷೆಯಾಗುತ್ತದೆ ಎಂದು ಬೆದರಿಸಿದ ಕಾರಣ ನೊಂದ ಬಾಲಕಿ ಬೇರೊಬ್ಬ ಕಾಲ್ಪನಿಕ ಹೆಸರನ್ನು ಹೇಳಿದ್ದರಿಂದ ಪ್ರಕರಣ ದಾಖಲಾಗಿತ್ತು. ನಂತರ ಕಾಲ್ಪನಿಕ ವ್ಯಕ್ತಿ ಬಾಲಕಿ ಹೇಳಿದ ಸ್ಥಳದಲ್ಲಿ ಇಲ್ಲದಿರುವುದರಿಂದ ಆಕೆಗೆ ಆಪ್ತ ಸಮಾಲೋಚನೆ ಮಾಡಿ ಧೈರ್ಯ ತುಂಬಿ ಪುನಃ ವಿಚಾರಿಸಿದಾಗ ನಿಜವಾದ ಆರೋಪಿ ಹೆಸರು ಹೇಳಿದ್ದಲ್ಲದೇ ಆತನೇ ನನ್ನ ಗರ್ಭಕ್ಕೆ ಕಾರಣ ಎಂದು ತಿಳಿಸಿದ್ದಾಳೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು, ಧರ್ಮಸ್ಥಳ ಪೊಲೀಸ್ ನಿರೀಕ್ಷಕರಾದ ನಾಗೇಶ್ ಕೆ ಅವರು ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.


Spread the love

About Laxminews 24x7

Check Also

ಖಮೇನಿ ಹತ್ಯೆ ಪ್ರತಿಭಟನೆಗಳ ಬಗ್ಗೆ ಪೋಸ್ಟ್‌ – ಕಾಶ್ಮೀರ ಸಂಸದರ ವಿರುದ್ಧ ಎಫ್‌ಐಆರ್‌

Spread the loveಶ್ರೀನಗರ: ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ  ಹತ್ಯೆ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ